ಚಾಮರಾಜನಗರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವಲಯ ಅರಣ್ಯಾಧಿಕಾರಿ ಒಬ್ಬರು ವರ್ಗಾವಣೆ ಪಟ್ಟಿ ತಯಾರಿಸಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಆರ್ಎಫ್ಒ ಒಬ್ಬರು ಯಾರೂ ಯಾವ ಸ್ಥಳಕ್ಕೆ ವರ್ಗಾವಣೆಯಾಗಬೇಕು ಎಂಬ ಪಟ್ಟಿ ತಯಾರಿಸಿರುವ ಆರೋಪ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರು ತೀವ್ರ ಆಕ್ಷೇಪ ಹೊರಹಾಕಿದ ಹಿನ್ನೆಲೆ ಸತ್ಯಾಸತ್ಯತೆ ಪರಿಶೀಲಿಸಲು ಎಪಿಸಿಸಿಎಫ್ ನೇತೃತ್ವದ ತಂಡ ರಚಿಸಿ, ವೈರಲ್ ಆಗಿರುವ ವರ್ಗಾವಣೆ ಪಟ್ಟಿಯ ಕೈಬರಹ ಯಾರದ್ದು ಎಂದು ಪತ್ತೆ ಮಾಡಿ ಕುಕೃತ್ಯದ ಮೂಲಕ ಇಲಾಖೆಗೆ ಕೆಟ್ಟ ಹೆಸರು ತರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಚಿವರು ಸೂಚಿಸಿದ್ದಾರೆ. ಅರಣ್ಯ ಇಲಾಖೆಯಲ್ಲಿ ಪಾರದರ್ಶಕವಾಗಿ ವರ್ಗಾವಣೆ ವ್ಯವಸ್ಥೆ ತರುವ ಸಲುವಾಗಿ ಕೌನ್ಸೆಲಿಂಗ್ ಮೂಲಕ ಟಿಸಿಎಂಎಸ್ನಲ್ಲಿ ನಡೆಸಲಾಗುತ್ತದೆ. ಅಧಿಕಾರಿಗಳೇ ಸಿಂಡಿಕೇಟ್ ಮಾಡಿಕೊಂಡು ಅವರೇ ಜಾಗ ಬದಲು ಮಾಡಿಕೊಳ್ಳುತ್ತಾರೆ ಎನ್ನುವುದಾದರೇ ಇದು ಆಡಳಿತ ವ್ಯವಸ್ಥೆಗೆ ಮಾರಕವಾಗುತ್ತದೆ ಎಂದು ಸಚಿವರು ಆದೇಶದಲ್ಲಿ ಎಂಬ ಮಾಹಿತಿ ತಿಳಿಸಿದ್ದಾರೆ ಎನ್ನಲಾಗಿದೆ.
ಇದರಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವಿವಿಧ ವಲಯಗಳಿಗೆ ಯಾರೂ ಯಾವ ಸ್ಥಳಕ್ಕೆ ವರ್ಗಾವಣೆ ಆಗಬೇಕೆಂಬ ಪಟ್ಟಿಯನ್ನು ವಲಯ ಅರಣ್ಯಾಧಿಕಾರಿಯೊಬ್ಬರು ತಯಾರಿಸಿರುವ ಆರೋಪ ಇದಾಗಿದೆ. ಹಾಗೂ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವಲಯವಾರು ಅಧಿಕಾರಿಗಳನ್ನು ಯಾವ ಸ್ಥಳಕ್ಕೆ ನಿಯುಕ್ತಿಗೊಳಿಸಬೇಕು ಎಂಬ ಕೈ ಬರಹದ ಪಟ್ಟಿ ಇದಾಗಿದ್ದು, ಇದರಲ್ಲಿ ಬಂಡೀಪುರ ಎಸಿಎಫ್ ಸೇರಿದಂತೆ ಎಲ್ಲ ವಲಯ ಅರಣ್ಯಾಧಿಕಾರಿಗಳು ಯಾವ ವಲಯದಿಂದ ಯಾವ ವಲಯಕ್ಕೆ ಬದಲಾಗಬೇಕು ಎಂಬ ವಿವರವಾದ ಪಟ್ಟಿ ಇದಾಗಿದೆ ಎನ್ನವುದಾಗಿದೆ. ಹಾಗಾಗಿ ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ಮಲ್ಲೇಶ್ ವಿರುದ್ಧ ನೆಟ್ಟಿಗರು ಆರೋಪ ಮಾಡಿದ್ದು ಇವರೇ ವರ್ಗಾವಣೆ ಪಟ್ಟಿ ತಯಾರು ಮಾಡಿದ್ದಾರೆ ಎಂದು ಆಕ್ಷೇಪ ಹೊರಹಾಕಿದ್ದಾರೆ. ಈ ಬಗ್ಗೆ ಇಂದು ಅರಣ್ಯ ಸಚಿವರು ಆದೇಶ ಹೊರಡಿಸಿ ಸತ್ಯಾಸತ್ಯತೆ ಮತ್ತು ಕೈ ಬರಹ ಪರಿಶೀಲಿಸುವಂತೆ ಆದೇಶಿಸಿದ್ದಾರೆ ಎನ್ನಬಹುದು.

















