ಮನೆ ರಾಜ್ಯ ಬಾಲಗರ್ಭಿಣಿಯರ ಸ್ಕ್ಯಾನಿಂಗ್ ಕೇಸ್‌; ಬಂಧಿತ ವೈದ್ಯರ ಪರ ಜೆಡಿಎಸ್ ಶಾಸಕ ಬ್ಯಾಟಿಂಗ್..!

ಬಾಲಗರ್ಭಿಣಿಯರ ಸ್ಕ್ಯಾನಿಂಗ್ ಕೇಸ್‌; ಬಂಧಿತ ವೈದ್ಯರ ಪರ ಜೆಡಿಎಸ್ ಶಾಸಕ ಬ್ಯಾಟಿಂಗ್..!

0

ಮಂಡ್ಯ : ಬಾಲಗರ್ಭಿಣಿಯರ ಸ್ಕ್ಯಾನಿಂಗ್ ಪ್ರಕರಣದಲ್ಲಿ ವೈದ್ಯರನ್ನು ಬಂಧಿಸಿರುವುದು ಸರಿಯಲ್ಲ ಎಂದು ಹೇಳುವ ಮೂಲಕ ಜೆಡಿಎಸ್ ಶಾಸಕ ವಿವಾದ ಸೃಷ್ಟಿ ಮಾಡಿದ್ದಾರೆ. ಕಳೆದ ಒಂದು ವಾರದ ಹಿಂದೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಬಾಲ ಗರ್ಭಿಣಿಯರನ್ನು ಕಾನೂನು ಬಾಹಿರವಾಗಿ ಸ್ಕ್ಯಾನಿಂಗ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಹಿನ್ನೆಲೆ ಪೊಲೀಸರು ಮೂವರು ವೈದ್ಯರನ್ನ ಬಂಧನ ಮಾಡಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಹೆಚ್.ಡಿ ಮಂಜು ವೈದ್ಯರ ಬೆಂಬಲಕ್ಕೆ ಬಂದಿದ್ದಾರೆ. ವೈದ್ಯರು ಯಾವುದೇ ತಪ್ಪು ಮಾಡಿಲ್ಲ, ಅಲ್ಲಿ ನೆಗ್ಲಿಜೆನ್ಸಿಯಷ್ಟೆ ಆಗಿದೆ. ಅಷ್ಟಕ್ಕೆ ಅವರನ್ನ ಬಂಧಿಸಿ ಜೈಲಿಗೆ ಹಾಕೋದು ಸರಿಯಲ್ಲ. ಇದರಿಂದ ವೈದ್ಯರನ್ನು ಮಾನಸಿಕವಾಗಿ ಕುಗ್ಗಿಸಿದಂತೆ ಆಗುತ್ತದೆ.

ತಪ್ಪು ಯಾರು ಮಾಡಿದ್ದಾರೋ ಅವರ ವಿರುದ್ಧ ಕ್ರಮವಾಗಬೇಕು, ಅದನ್ನು ವೈದ್ಯರನ್ನು ಬಂಧಿಸುವುದು ಸರಿಯಲ್ಲ. ಈ ರೀತಿ ಪ್ರಕರಣಗಳು ಆದರೆ ವೈದ್ಯರು ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಾರೆ ಎಂದು ಹೆಚ್.ಟಿ ಮಂಜು ಬಂಧಿತ ವೈದ್ಯರ ಪರ ಬ್ಯಾಟಿಂಗ್ ಮಾಡಿದ್ದಾರೆ.