ಮನೆ ರಾಷ್ಟ್ರೀಯ ವೈದ್ಯೆ ಗುರುಪ್ರೀತ್ ಕೌರ್’ನೊಂದಿಗೆ ಪಂಜಾಬ್ ಸಿಎಂ ಭಗವಂತ್ ಮಾನ್ ವಿವಾಹ

ವೈದ್ಯೆ ಗುರುಪ್ರೀತ್ ಕೌರ್’ನೊಂದಿಗೆ ಪಂಜಾಬ್ ಸಿಎಂ ಭಗವಂತ್ ಮಾನ್ ವಿವಾಹ

0

ಚಂಡೀಗಡ(Chandigad): ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ‌ ವೈದ್ಯೆ ಗುರುಪ್ರೀತ್ ಕೌರ್ ಅವರನ್ನು ಸರಳವಾಗಿ ವಿವಾಹವಾದರು.

ಚಂಡೀಗಡದ ಮಾನ್‌ ನಿವಾಸದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸೇರಿದಂತೆ ಎಎಪಿಯ ಕೆಲ ನಾಯಕರು ಉಪಸ್ಥಿತರಿದ್ದರು. ಮದುವೆಗೆ ಕೆಲವು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

ಮಾನ್ ಈ ಹಿಂದೆ ಇಂದರ್‌ಪ್ರೀತ್ ಕೌರ್ ಅವರನ್ನು ಮದುವೆಯಾಗಿ, 2015 ರಲ್ಲಿ ವಿಚ್ಛೇದನ ನೀಡಿದ್ದಾರೆ. ಮಾನ್ ಅವರ ಮೊದಲ ಪತ್ನಿ ಮತ್ತು ಇಬ್ಬರು ಮಕ್ಕಳು ಅಮೆರಿಕದಲ್ಲಿ ನೆಲೆಸಿದ್ದಾರೆ. ಮಾನ್‌ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೆ ಇಬ್ಬರೂ ಮಕ್ಕಳು ಆಗಮಿಸಿದ್ದರು.

ಭಗವಂತ್ ಮಾನ್ ಅವರ ತಾಯಿ ಮತ್ತು ಸಹೋದರಿ, ಗುರುಪ್ರೀತ್‌ ಕೌರ್‌ ಅವರನ್ನು ವಧುವಾಗಿ ಆಯ್ಕೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.