ಮೈಸೂರು : ಮೈಸೂರಿನ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಹೊರಗುತ್ತಿಗೆ ಪಾರ್ಕಿಂಗ್ ಭದ್ರತಾ ಸಿಬ್ಬಂದಿ ಭಕ್ತರೊಂದಿಗೆ ಅನುಚಿತವಾಗಿ ವರ್ತಿಸಿದ ಹಿನ್ನೆಲೆ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಚಾಮುಂಡಿ ಬೆಟ್ಟದ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ರೋಹಿತ್ ವಜಗೊಂಡ ಭದ್ರತಾ ಸಿಬ್ಬಂದಿ. ದೇವಸ್ಥಾನಕ್ಕೆ ಬಂದಿದ್ದ ಭಕ್ತಾದಿಗಳೊಂದಿಗೆ ಪಾರ್ಕಿಂಗ್ ಹಣದ ವಿಚಾರವಾಗಿ ಜಗಳ ಹಾಗೂ ಅನುಚಿತ ವರ್ತನೆ ನಡೆಸಿದ್ದಾನೆ.
ಚಾಮುಂಡಿ ಬೆಟ್ಟಕ್ಕೆ ಬಂದಿದ್ದ, ವಾಹನ ಚಾಲಕರಿಂದ ನೂರು ರೂಪಾಯಿ ಪಡೆದು ರೂ. 50 ಟಿಕೆಟ್ ಕೊಟ್ಟಿದ್ದಾರೆ ಎಂಬ ವಿಡಿಯೋ ವೈರಲ್ ಆಗಿತ್ತು. ಈ ರೀತಿ ಬೇರೆ ಯಾವ ಸಿಬ್ಬಂದಿಯೋ ಚಾಮುಂಡಿ ಬೆಟ್ಟಕ್ಕೆ ಭಕ್ತರೊಂದಿಗೆ ಅನುಚಿತವಾಗಿ ವರ್ತಿಸಬಾರದು ಸಂಯಮದಿಂದ ನಡೆದುಕೊಳ್ಳಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ಎಂಜೆ ರೂಪ ಇತರೆ ಸಿಬ್ಬಂದಿಗಳಿಗೆ ತಾಕೀತು ನೀಡಿದ್ದಾರೆ.

















