ಮನೆ ಸುದ್ದಿ ಜಾಲ ಸಿಎಂ ವಿಜಯ್ ವಾರ್ನಿಂಗ್ : ಸಾರ್ವಜನಿಕರ ಸ್ಥಳಗಳಲ್ಲಿ ಬ್ಯಾನರ್​ ಕಟ್ಟಿ ತೊಂದರೆ ಕೊಟ್ಟರೆ ಕಠಿಣ ಕ್ರಮ

ಸಿಎಂ ವಿಜಯ್ ವಾರ್ನಿಂಗ್ : ಸಾರ್ವಜನಿಕರ ಸ್ಥಳಗಳಲ್ಲಿ ಬ್ಯಾನರ್​ ಕಟ್ಟಿ ತೊಂದರೆ ಕೊಟ್ಟರೆ ಕಠಿಣ ಕ್ರಮ

0

ಚೆನ್ನೈ(ತಮಿಳುನಾಡು): ಮೊದಲ ಚುನಾವಣೆಯಲ್ಲೇ ಅಭೂತಪೂರ್ವ ಬೆಂಬಲದೊಂದಿಗೆ ತಮಿಳುನಾಡು ವಿಧಾನಸಭೆಯಲ್ಲಿ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವಲ್ಲಿ ಸಫಲವಾದ ತಮಿಳಿಗ ವೆಟ್ರಿ ಕಳಗಂ ಮಿತ್ರ ಪಕ್ಷಗಳ ಸಹಕಾರದೊಂದಿಗೆ ಸರ್ಕಾರ ರಚಿಸಿದೆ. ಸಿಎಂ ಆಗಿ ಪ್ರಮಾಣವಚನ ಕೈಗೊಂಡ ಬೆನ್ನಲ್ಲೇ ಸಿಎಂ ವಿಜಯ್​ ಹಲವು ಪ್ರಮುಖ ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ‌ ಎನ್ನಬಹುದಾಗಿದೆ.

ಈ ಕುರಿತು ಟಿವಿಕೆ ಪಕ್ಷ, ತಮ್ಮ ಬೆಂಬಲಿಗರಿಗೆ ಎಚ್ಚರಿಕೆ ನೀಡಿದೆ. ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವಂತಹ ಯಾವುದೇ ಘಟನೆಗಳು ಪಕ್ಷದ ಬೆಂಬಲಿಗರಿಂದ ಆದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸ್ಥಳಗಳಲ್ಲಿ ಬ್ಯಾನರ್​, ಫಲಕಗಳ ಅಳವಡಿಕೆಗಳನ್ನು ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದರೊಂದಿಗೆ ಜನರ ಕಲ್ಯಾಣ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದೆ. ಎಕ್ಸ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ, ಸಚಿವ ಎನ್. ಆನಂದ್​, ಸಾರ್ವಜನಿಕರಿಗೆ ತೊಂದರೆ ನೀಡುವ, ನಿಯಮಗಳನ್ನು ಉಲ್ಲಂಘಿಸುವ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಆದೇಶವು ಪಕ್ಷದ ಅಧ್ಯಕ್ಷರ ಸ್ಪಷ್ಟ ಒಪ್ಪಿಗೆ ಹೊಂದಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.