ಮೈಸೂರು : ಮೈಸೂರು ನಗರದ ಬಲ್ಲಾಳ್ ವೃತದ ಸಮೀಪವಿರುವ ಪಶ್ಚಿಮ (KA 09) ಆರ್ಟಿಓ ಕಚೇರಿಯಲ್ಲಿ ಇರುವ ಒಂದೇ ಸಂಖ್ಯೆಯ ನಂಬರ್ ಪ್ಲೇಟ್ ಉಳ್ಳ ಬುಲೆಟ್ ಎಂಇಜಿ 2261 ವಾಹನ ಯಾವುದು ಅಸಲಿ ಯಾವುದು ನಕಲಿ ಎಂದು ತಿಳಿಯದೆ ಹಲವಾರು ತಿಂಗಳಿಂದ ಪಶ್ಚಿಮ ಆರ್ಟಿಓ ದಲ್ಲಿ ನಿಂತಿದೆ.
ಒಂದು ವಾಹನವು ಮೈಸೂರಿನ ಜಯಂತ್ ಎಂಬುವ ಹೆಸರಿನಲ್ಲಿದ್ದು ಮತ್ತೊಂದು ಆಂಧ್ರ ಮೂಲದ ಸೈನಿಕರೊಬ್ಬರ ಹೆಸರಿನಲ್ಲಿದೆ. ಆಂಧ್ರ ಮೂಲ ಸೈನಿಕರು ಮೈಸೂರಿನಲ್ಲಿ ದೂರು ನೀಡಿದ್ದರಿಂದ ಎರಡು ಬೈಕ್ ಗಳು ಒಂದೇ ನಂಬರ್ ಹೇಗೆ ಇರಲು ಸಾಧ್ಯ ಎಂದು ಆರ್ ಟಿ ಓ ಅಧಿಕಾರಿಗಳು ಪತ್ತೆ ಹಚ್ಚಲು ಹರಸಾಹಸ ಪಡುತ್ತಿದ್ದಾರೆ.
ಈ ಎರಡು ವಾಹನದ ದಾಖಲಾತಿಗಳನ್ನು ಸಂಬಂಧಪಟ್ಟ ಕಂಪನಿಗೆ ಕೊಟ್ಟಿದ್ದು ವಾಹನದ ವಾರಸುದಾರರ ಬಗ್ಗೆ ನೀಡುವಂತೆ ಕೋರಿದ್ದೆ ಎಂದು ಪಶ್ಚಿಮ ಆರ್ಟಿಓ ಅಧಿಕಾರಿ ರವರು ತಿಳಿಸಿದ್ದಾರೆ.
















