ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ಇಂಧನ ಉಳಿಸಲು ಪ್ರಧಾನಿ ಮೋದಿ ಮನವಿ ಮಾಡಿದರು. ಅವರ ಮನವಿಗೆ ದೇಶಾದ್ಯಂತ ಸಾಕಷ್ಟು ಉತ್ತಮ ಸ್ಪಂದನೆ ಬರುತ್ತಿದೆ. ಎಲೆಕ್ಟ್ರಿಕ್ ವಾಹನ, ಸರ್ಕಾರಿ ಸಾರಿಗೆಯನ್ನು ಬಳಸಲು ಮನವಿ ಮಾಡಿದ್ದರು. ಮಧ್ಯಪ್ರದೇಶದ ನ್ಯಾಯಾಧೀಶರು ಕೂಡ ಪ್ರಧಾನಿ ಮೋದಿ ಮನವಿಗೆ ಸ್ಪಂದಿಸಿ ಕಾರಿನ ಬದಲು ಸೈಕಲ್‌ನಲ್ಲಿ ಆಗಮಿಸಿದರು.
ನ್ಯಾಯಾಧೀಶರಾದ ಬನಾಲ್ ನಾನು ಮಾಧ್ಯಮದಲ್ಲಿ ಪ್ರಧಾನ ನರೇಂದ್ರ ಮೋದಿ ರವರು ಹೇಳಿರುವ ಹೇಳಿಕೆ ಕೇಳಿದ್ದೆ. ಆದ್ದರಿಂದ ನಾನು ಸಹ ಸೈಕಲ್ಲಿನಲ್ಲಿ ಕೋರ್ಟಿಗೆ ಬಂದು ಜನಗಳಿಗೆ ಸಾಧ್ಯವಾದಷ್ಟು ಕಡಿಮೆ ದೂರಕ್ಕೆ ಪ್ರಯಾಣಿಸಲು ಸೈಕಲ್ ಬಳಸುವ ಸಂದೇಶ ಈ ಮುಖಾಂತರ ಈ ಮುಖಾಂತರ ನೀಡಿದ್ದೇನೆ. ಅವರ ಜೊತೆ ಸುರಕ್ಷತಾ ಸಿಬ್ಬಂದಿ ಸಹ ಸೈಕಲ್ ಮುಖಾಂತರ ಬಂದಿದ್ದರು.

















