ಮನೆ ಸುದ್ದಿ ಜಾಲ ಡೊನಾಲ್ಡ್ ಟ್ರಂಪ್  : ಅಮೆರಿಕ ಶಾಂತಿಯುತವಾಗಿ ಅಥವ ಬೇರೆ ಮಾರ್ಗದಲ್ಲಿ ಇರಾನ್ ಯುದ್ಧವನ್ನು ಗೆಲ್ಲುತ್ತದೆ

ಡೊನಾಲ್ಡ್ ಟ್ರಂಪ್  : ಅಮೆರಿಕ ಶಾಂತಿಯುತವಾಗಿ ಅಥವ ಬೇರೆ ಮಾರ್ಗದಲ್ಲಿ ಇರಾನ್ ಯುದ್ಧವನ್ನು ಗೆಲ್ಲುತ್ತದೆ

0

ವಾಷಿಂಗ್ಟನ್ ಡಿಸಿ, ಅಮೆರಿಕ: ಇರಾನ್ ಮಿಲಿಟರಿಯನ್ನು ನಿರ್ನಾಮ ಮಾಡಲಾಗಿದೆ. ಅಮೆರಿಕವು ಈ ಯುದ್ಧವನ್ನು ಶಾಂತಿಯುತ ಮಾರ್ಗ ಅಥವಾ ಬೇರೆ ರೀತಿಯಲ್ಲಿ ಗೆಲ್ಲಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದು ಚೀನಾಕ್ಕೆ ಪ್ರಯಾಣ ಬೆಳೆಸುವ ಮುನ್ನ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ಧಾರೆ. ಇರಾನ್​ ವಿಚಾರದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಸ್ತಕ್ಷೇಪ ಮಾಡಬೇಕೆಂದು ನೀವು ಬಯಸುತ್ತೀರಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಟ್ರಂಪ್, ಇಲ್ಲ, ಇರಾನ್‌ ಪರವಾಗಿ ನಮಗೆ ಯಾವುದೇ ಸಹಾಯದ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ನಾವು ಅದನ್ನು ಒಂದಲ್ಲ ಒಂದು ರೀತಿಯಲ್ಲಿ ಗೆಲ್ಲುತ್ತೇವೆ. ನಾವು ಶಾಂತಿಯುತ ಅಥವಾ ಬೇರೆ ರೀತಿಯಲ್ಲಿ ಗೆಲ್ಲುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಬಂದಿದೆ.

ಹಾಗೂ ಇರಾನ್​ ಮೇಲಿನ ದಿಗ್ಬಂಧನವು ತುಂಬಾ ಪರಿಣಾಮಕಾರಿಯಾಗಿದೆ. ಇದು ಶೇ 100ರಷ್ಟು ವರ್ಕೌಟ್​ ಆಗಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ವೇಳೆ ಡೊನಾಲ್ಡ್​ ಟ್ರಂಪ್​, NATO ವಿರುದ್ಧ ಟೀಕಾಪ್ರಹಾರ ನಡೆಸಿದರು. NATO ಬಗ್ಗೆ ನನಗೆ ತುಂಬಾ ನಿರಾಸೆಯಾಗಿದೆ. ನಾವು ಬಯಸಿದಾಗ NATO ನಮ್ಮ ಸಹಾಯಕ್ಕೆ ಬರಲಿಲ್ಲ. ನಮಗೀಗ NATO ಅಗತ್ಯವಿಲ್ಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ ಜಜೀರಾ ವರದಿಯ ಪ್ರಕಾರ, NATO ಪ್ರಧಾನ ಕಾರ್ಯದರ್ಶಿ ಪ್ರಸ್ತುತ ಯುದ್ಧದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಕಡಲ ಭದ್ರತೆ ಹಾಗೂ ಪ್ರಾದೇಶಿಕ ಸ್ಥಿರತೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆಯ ಮಧ್ಯೆ ಹಲವು ಚರ್ಚೆಗಳು ನಡೆಯುತ್ತಿವೆ. NATO ಸದಸ್ಯರು ಪ್ರಮುಖ ವ್ಯಾಪಾರದ ಕಾರಿಡಾರ್‌ಗಳನ್ನು ರಕ್ಷಿಸುವಲ್ಲಿ ಹೆಚ್ಚಿನ ಗಮನ ನೀಡುತ್ತಿದ್ದಾರೆ.

ಈ ತಕ್ಷಣದ ಭೌಗೋಳಿಕ ರಾಜಕೀಯ ಅಡೆತಡೆಗಳ ಹೊರತಾಗಿಯೂ, ನ್ಯಾಟೋ ಆಂತರಿಕ ಆರೋಗ್ಯ ಮತ್ತು ಆರ್ಥಿಕ ಬದ್ಧತೆಯ ಬಗ್ಗೆ ರುಟ್ಟೆ ವಿಶ್ವಾಸದಿಂದಲೇ ಇದ್ದಾರೆ. ನ್ಯಾಟೋದ ಭವಿಷ್ಯದ ಬಗ್ಗೆ ನಾನು ಅತ್ಯಂತ ಆಶಾವಾದಿಯಾಗಿದ್ದೇನೆ ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿಗಳು ಹೇಳಿದ್ದಾರೆ. ಅಮೆರಿಕ ಮತ್ತು ಇರಾನ್​ ಸಂಘರ್ಷವು ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿದೆ, ಹಾರ್ಮುಜ್ ಜಲಸಂಧಿಯನ್ನು ಟೆಹ್ರಾನ್​ ನಿರ್ಬಂಧಿಸಿದೆ. ಈ ಮಾರ್ಗದ ಮೂಲಕ ವಿಶ್ವದ ತೈಲ ಮತ್ತು ಅನಿಲದ ಸುಮಾರು ಐದನೇ ಒಂದು ಭಾಗದಷ್ಟು ಪ್ರಮಾಣದ ತೈಲ ಸಾಗಣೆ ಆಗುತ್ತದೆ. ಜಾಗತಿಕ ಪೂರೈಕೆ ಕೊರತೆ ಪರಿಹರಿಸುವ ಪ್ರಯತ್ನದಲ್ಲಿ ವಾಷಿಂಗ್ಟನ್ ಮಾರ್ಚ್‌ನಲ್ಲಿ ಇರಾನಿನ ತೈಲದ ಮೇಲಿನ ಕೆಲವು ನಿರ್ಬಂಧಗಳನ್ನು ಸಡಿಲಿಸಿತ್ತು. ಆದರೆ ಈಗ ಮತ್ತೆ ಅದರ ನಿರ್ಬಂಧವನ್ನು ಬಿಗಿಗೊಳಿಸಿದೆ. ಇರಾನ್‌ನ ಹೆಚ್ಚಿನ ತೈಲವು ಏಷ್ಯಾಕ್ಕೆ ಸಾಗಣೆಯಾಗುತ್ತಿದ್ದು, ಅದರಲ್ಲಿ ಚೀನಾ ಪ್ರಮುಖ ಆಮದುದಾರ ರಾಷ್ಟ್ರವಾಗಿದೆ. ಬೀಜಿಂಗ್ ಒಟ್ಟಾರೆಯಾಗಿ ಟೆಹ್ರಾನ್‌ನ ಅತಿದೊಡ್ಡ ವ್ಯಾಪಾರ ಪಾಲುದಾರರನಾಗಿದೆ ಎನ್ನಲಾಗಿದೆ.