ಮನೆ ಸುದ್ದಿ ಜಾಲ 600 ಹಳ್ಳಿಗಳಲ್ಲಿ ಕನ್ನಡ ಶಾಲೆ ಉಳಿವಿಗಾಗಿ ಸಾವಿರ ಕಿ.ಮೀ. ಪಾದಯಾತ್ರೆ : ಮಂಡ್ಯ

600 ಹಳ್ಳಿಗಳಲ್ಲಿ ಕನ್ನಡ ಶಾಲೆ ಉಳಿವಿಗಾಗಿ ಸಾವಿರ ಕಿ.ಮೀ. ಪಾದಯಾತ್ರೆ : ಮಂಡ್ಯ

0

ರೈತ ಮುಖಂಡರು ಬಿಸಿಲೂ ಲೆಕ್ಕಿಸದೆ ನಿತ್ಯ ಸರಾಸರಿ 30 ಕಿ.ಮೀ. ಹೆಜ್ಜೆ ಹಾಕುತ್ತಿದ್ದಾರೆ. ಸದ್ಯ, 150 ಗ್ರಾಮ ಪಂಚಾಯಿತಿಗಳು, 600 ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ. ಸರ್ಕಾರಿ ಶಾಲೆಗೆ ಮಕ್ಕಳ ಸೇರಿಸಲು ಕೋರುತ್ತಿದ್ದಾರೆ. ಹಳ್ಳಿ ಕಟ್ಟೆಗಳಲ್ಲಿ ಸಭೆ ನಡೆಸುತ್ತಿದ್ದಾರೆ. ಶಾಲೆ, ಗ್ರಾಮ ಪಂಚಾಯಿತಿ, ದೇವಸ್ಥಾನ ಆವರಣದಲ್ಲಿ ರಾತ್ರಿ ವಾಸ್ತವ್ಯ ಹೂಡುತ್ತಿದ್ದಾರೆ. ಇವರಿಗೆ, ಸ್ಥಳೀಯ ಮುಖಂಡರು ಮತ್ತು ಎಸ್‌ಡಿಎಂಸಿ ಸದಸ್ಯರು ವಸತಿ ಮತ್ತು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ ಏನ್ನಲಾಗಿದೆ.

ಏ.11ರಂದು ಮಂಡ್ಯದ ಸರ್.ಎಂ. ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಪಾದಯಾತ್ರೆ ಆರಂಭವಾಗಿತ್ತು. ಜಿಲ್ಲೆಯ 233 ಗ್ರಾಮ ಪಂಚಾಯಿತಿಗಳು, ಸಾವಿರ ಗ್ರಾಮಗಳಿಗೆ ಭೇಟಿ ನೀಡಿ, ಜಾಗೃತಿ ಮೂಡಿಸುವ ಗುರಿ ಇದೆ.351 ಶಾಲೆಗಳಿಗೆ ಬೀಗ: ‘ಜಿಲ್ಲೆಯಲ್ಲಿ 10 ವರ್ಷಗಳಲ್ಲಿ ಕನ್ನಡ ಮಾಧ್ಯಮದ 351 ಶಾಲೆಗಳು ಮುಚ್ಚಿವೆ. ಮಕ್ಕಳನ್ನು ಸೇರಿಸುವ ಮೂಲಕ ಇವು ಪುನರಾರಂಭವಾಗಬೇಕು’ ಎಂಬುದು ರೈತ ಮುಖಂಡ ಇಂಡುವಾಳು ಚಂದ್ರಶೇಖರ್ ಅವರ ಪ್ರತಿಪಾದನೆ. ಹಾಗೂ ‘ಜೂನ್ 6ರಂದು ಇಂಡುವಾಳು ಪಂಚಾಯಿತಿಯಿಂದ ಮಂಡ್ಯದ ಸಂಜಯ ವೃತ್ತದವರೆಗೆ ‘ಪಂಜಿನ ಮೆರವಣಿಗೆ’ ನಡೆಸಿ, ಪಾದಯಾತ್ರೆ ಮುಕ್ತಾಯಗೊಳಿಸುತ್ತೇವೆ’ ಎಂದು ರೈತ ಮುಖಂಡರು ತಿಳಿಸಿದ್ದಾರೆ ಎನ್ನಲಾಗಿದೆ.