ಮನೆ ಸುದ್ದಿ ಜಾಲ 30ಕ್ಕೂ ಹೆಚ್ಚು ಡ್ರಗ್ ವ್ಯಸನಿಗಳು ಸರ್ಕಾರಿ ಪುನರ್ವಸತಿ ಕೇಂದ್ರದ ಬೀಗ ಒಡೆದು ಪರಾರಿ

30ಕ್ಕೂ ಹೆಚ್ಚು ಡ್ರಗ್ ವ್ಯಸನಿಗಳು ಸರ್ಕಾರಿ ಪುನರ್ವಸತಿ ಕೇಂದ್ರದ ಬೀಗ ಒಡೆದು ಪರಾರಿ

0

ಮೋಗಾ, ಪಂಜಾಬ್​: ಪಂಜಾಬ್‌ನ ಮೋಗಾ ಜಿಲ್ಲೆಯ ಜನೇರ್ ಗ್ರಾಮದಲ್ಲಿ ಸರ್ಕಾರಿ ಪುನರ್ವಸತಿ ಕೇಂದ್ರದಿಂದ ಮಾದಕ ವ್ಯಸನಿಗಳು ಪರಾರಿಯಾಗಿರುವ ಘಟನೆ ನಡೆದಿದೆ. ಬುಧವಾರ ರಾತ್ರಿ ಸರ್ಕಾರಿ ಪುನರ್ವಸತಿ ಕೇಂದ್ರದ ಮುಖ್ಯ ದ್ವಾರದ ಬೀಗ ಒಡೆದು 30 ಕ್ಕೂ ಹೆಚ್ಚು ಮಾದಕ ವ್ಯಸನಿಗಳು ಎಸ್ಕೇಪ್ ಆಗಿದ್ದಾರೆ. ಈ ಘಟನೆ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕೇಂದ್ರದಲ್ಲಿನ ಮಾದಕ ವ್ಯಸನಿಗಳೆಲ್ಲ ಒಟ್ಟುಗೂಡಿ ಕೇಂದ್ರದ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಮುಖ್ಯ ದ್ವಾರದ ಬೀಗವನ್ನು ಇಟ್ಟಿಗೆಗಳಿಂದ ಒಡೆದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯ ಬೆನ್ನಲ್ಲೇ ಸ್ಥಳದಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು. ಈ ಸಂಬಂಧ ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಲಾಯಿತು. ಮಾಹಿತಿ ಸಿಕ್ಕ ತಕ್ಷಣವೇ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದೆ. ಸುಮಾರು 30 ರೋಗಿಗಳು ಓಡಿಹೋದರು,

ಆದರೆ ನಾವು ಅವರಲ್ಲಿ ಕೆಲವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ. ಅವರ ವಿವರಗಳನ್ನು ಪೊಲೀಸರೊಂದಿಗೆ ಹಂಚಿಕೊಂಡಿದ್ದೇವೆ ಮತ್ತು ಅವರ ಪೋಷಕರನ್ನು ಸಂಪರ್ಕಿಸಿದ್ದೇವೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ಕೆಲವು ಮಾದಕ ವ್ಯಸನಿಗಳು ಗೇಟ್‌ನ ಬೀಗ ಮುರಿದು ಪರಾರಿಯಾಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ರೋಗಿಗಳು ಯಾವ ದಿಕ್ಕಿನಲ್ಲಿ ಓಡಿಹೋದರು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದರು. ನಂತರ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. “ಕೆಲವು ರೋಗಿಗಳು ಬುಧವಾರ ರಾತ್ರಿ ಸರ್ಕಾರಿ ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ ಮತ್ತು ತಪ್ಪಿಸಿಕೊಂಡವರನ್ನು ಶೀಘ್ರದಲ್ಲೇ ಪತ್ತೆಹಚ್ಚಲಾಗುವುದು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.  ಹಾಗೂ ಪಂಜಾಬ್ ರಾಜ್ಯದಲ್ಲಿ ದಶಕಗಳಿಂದಲೂ ಡ್ರಗ್ಸ್ ಹಾವಳಿ ಇದೆ. ಇದು ಅಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಗಂಭೀರ ಸಮಸ್ಯೆಯಾಗಿದೆ. ಅಂತೆಯೇ ಡ್ರಗ್ಸ್ ನಿರ್ಮೂಲನೆಗೆ ಅಲ್ಲಿನ ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ ಎಂದು ಮಾಹಿತಿ ತಿಳಿದುಬಂದಿದೆ.