ಮನೆ ರಾಷ್ಟ್ರೀಯ ಲಕ್ಷದ ಬ್ಯಾಗ್, ಬೂಟ್ಸ್ ಧರಿಸಿದ ಐಶ್ವರ್ಯ ರೈ – ಕೇನ್ಸ್‌ಗೂ ಮುನ್ನವೇ ಏರ್‌ಪೋರ್ಟ್ ಲುಕ್ ವೈರಲ್..!

ಲಕ್ಷದ ಬ್ಯಾಗ್, ಬೂಟ್ಸ್ ಧರಿಸಿದ ಐಶ್ವರ್ಯ ರೈ – ಕೇನ್ಸ್‌ಗೂ ಮುನ್ನವೇ ಏರ್‌ಪೋರ್ಟ್ ಲುಕ್ ವೈರಲ್..!

0

ಪ್ರತಿಷ್ಠಿತ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಲು ಫ್ರಾನ್ಸ್ಗೆ ಹೊರಟಿದ್ದ ನಟಿ ಐಶ್ವರ್ಯ ರೈ ಬಚ್ಚನ್ ಅವರ ಏರ್‌ಪೋರ್ಟ್ ಲುಕ್ ಎಲ್ಲರ ಗಮನ ಸೆಳೆದಿದೆ. 2.1 ಲಕ್ಷ ರೂ. ಮೌಲ್ಯದ ಗುಸ್ಸಿ ಬ್ಯಾಗ್ ಹಾಗೂ 1.78 ಲಕ್ಷ ರೂ. ಬೆಲೆಯ ಬೂಟ್ಸ್ ಧರಿಸಿದ್ದ ನಟಿಯ ಸ್ಟೈಲ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಫ್ರಾನ್ಸ್ನ ಪ್ರತಿಷ್ಠಿತ ಕೇನ್ಸ್ ಫಿಲ್ಮ್ ಫೆಸ್ಟಿವಲ್ ಆರಂಭವಾಗಿದ್ದು, ಭಾರತೀಯ ಸೆಲೆಬ್ರಿಟಿಗಳು ಹಾಗೂ ಇನ್‌ಫ್ಲುಯೆನ್ಸರ್‌ಗಳು ಭಾಗವಹಿಸುತ್ತಿದ್ದಾರೆ. ಈ ಫೆಸ್ಟಿವಲ್ ಆರಂಭವಾದಾಗಿನಿಂದ ಅಭಿಮಾನಿಗಳು ಈ ಬಾರಿ ಐಶ್ವರ್ಯಾ ರೈ ಕೇನ್ಸ್‌ಗೆ ಬರಲ್ವಾ ಎಂದು ಪ್ರಶ್ನಿಸಿದ್ದರು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ನಟಿ ತನ್ನ ಮಗಳು ಆರಾಧ್ಯ ಬಚ್ಚನ್ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಕೇನ್ಸ್‌ಗೆ ಪ್ರಯಾಣ ಬೆಳೆಸಿರುವ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಕೇನ್ಸ್ಗೆ ತೆರಳುವ ವೇಳೆ ಐಶ್ವರ್ಯಾ ರೈ ಸಂಪೂರ್ಣ ಕಪ್ಪು ಬಣ್ಣದ ಸ್ಟೈಲಿಶ್ ಲುಕ್‌ನಲ್ಲಿ ಗಮನ ಸೆಳೆದರು. ನಟಿ ಐಶ್ವರ್ಯ ಭಾರತದ ಫೇಮಸ್ ಫ್ಯಾಷನ್ ಡಿಸೈನರ್ ಧೃವ ಕಪೂರ್ ಅವರ ವಿಂಟರ್ ಕಲೆಕ್ಷನ್‌ನ ಕಪ್ಪು ಬ್ಲೇಜರ್ ಹಾಗೂ ಪ್ಯಾಂಟ್ ಧರಿಸಿದ್ದರು. ಬ್ಲೇಜರ್‌ನಲ್ಲಿ ಸೀಕ್ವಿನ್ ವರ್ಕ್ ಇದ್ದು, ಅದಕ್ಕೆ ಸರಿಹೊಂದುವಂತೆ ಸ್ಟ್ರೇಟ್ ಹೇರ್‌ಸ್ಟೈಲ್ ಹಾಗೂ ಡಾರ್ಕ್ರೆಡ್ ಲಿಪ್‌ಸ್ಟಿಕ್ ಲುಕ್ ಐಶ್ವರ್ಯ ಅವರ ಔಟ್‌ಫಿಟ್‌ಗೆ ಇನ್ನಷ್ಟು ಮೆರುಗು ನೀಡಿತ್ತು.

ಇದೇ ವೇಳೆ ಐಶ್ವರ್ಯಾ ಧರಿಸಿದ್ದ ಗುಸ್ಸಿ ಸಿಗ್ನೋರಿಯಾ ಬೂಟ್ಸ್ ಕೂಡ ಎಲ್ಲರ ಗಮನ ಸೆಳೆಯಿತು. ಈ ಬೂಟ್ಸ್‌ ಬೆಲೆ ಸುಮಾರು 1.78 ಲಕ್ಷ ರೂಪಾಯಿ. ಜೊತೆಗೆ ಅವರು ಕ್ಯಾರಿ ಮಾಡಿದ್ದ ಗುಸ್ಸಿ ಡಯಾನಾ ಬ್ಯಾಗ್ ಬೆಲೆ 2.1 ಲಕ್ಷದಿಂದ 2.39 ಲಕ್ಷ ರೂಪಾಯಿಯವರೆಗೆ ಇದೆ. ಕಾನ್ಸ್ ಫಿಲ್ಮ್ ಫೆಸ್ಟಿವಲ್ ಆರಂಭವಾದಾಗಿನಿಂದಲೇ ಐಶ್ವರ್ಯಾ ರೈ ಭಾಗವಹಿಸುತ್ತಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಲೋರಿಯಲ್ ಪ್ಯಾರಿಸ್ ಬಿಡುಗಡೆ ಮಾಡಿದ ಪ್ರಮೋಷನ್ ವಿಡಿಯೋದಲ್ಲಿ ಐಶ್ವರ್ಯಾ ಪೋಸ್ಟರ್ ಕಾಣಿಸದ ಹಿನ್ನೆಲೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆದಿತ್ತು. ಬಳಿಕ ಬ್ರ‍್ಯಾಂಡ್ ಕಾಮೆಂಟ್ ಮೂಲಕ ಅವರು ಸದಾ ವಿಶೇಷ ಎಂದು ಪ್ರತಿಕ್ರಿಯೆ ನೀಡಿತ್ತು.

ಐಶ್ವರ್ಯಾ ರೈ ಮೊದಲ ಬಾರಿಗೆ 2002ರಲ್ಲಿ ದೇವದಾಸ್ ಚಿತ್ರವನ್ನು ಪ್ರಮೋಟ್ ಮಾಡಲು ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಹಾಜರಾಗಿದ್ದರು. ಆ ವೇಳೆ ಶಾರುಖ್ ಖಾನ್ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಜೊತೆ ಅವರು ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಂಡಿದ್ದರು. ಡಿಸೈನರ್ ನೀತಾ ಲುಲ್ಲಾ ವಿನ್ಯಾಸದ ಹಳದಿ ಸೀರೆ ಧರಿಸಿದ್ದ ಅವರ ಲುಕ್ ಇಂದಿಗೂ ಅಭಿಮಾನಿಗಳ ನೆಚ್ಚಿನ ಫ್ಯಾಷನ್ ಕ್ಷಣಗಳಲ್ಲಿ ಒಂದಾಗಿದೆ. 2003ರಲ್ಲಿ ಐಶ್ವರ್ಯಾ ರೈ ಕೇನ್ಸ್ ಜ್ಯೂರಿ ಸದಸ್ಯೆಯಾಗಿದ್ದ ಮೊದಲ ಭಾರತೀಯ ನಟಿಯಾಗಿ ಇತಿಹಾಸ ನಿರ್ಮಿಸಿದ್ದರು. ಬಳಿಕ ಪ್ರತಿವರ್ಷವೂ ಅವರ ರೆಡ್ ಕಾರ್ಪೆಟ್ ಲುಕ್‌ಗಳು ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿವೆ.