ಮನೆ ಸುದ್ದಿ ಜಾಲ ಪುಲ್ವಾಮಾ ದಾಳಿ ಸಂಚುಕೋರ ಹಂಝಾ ಬುರ್ಹಾನ್ ಪಾಕ್‌ ನೆಲದಲ್ಲೆ ಹತ್ಯೆ

ಪುಲ್ವಾಮಾ ದಾಳಿ ಸಂಚುಕೋರ ಹಂಝಾ ಬುರ್ಹಾನ್ ಪಾಕ್‌ ನೆಲದಲ್ಲೆ ಹತ್ಯೆ

0

ನವದೆಹಲಿ: ಪುಲ್ವಾಮಾ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಹಂಝಾ ಬುರ್ಹಾನ್‌ನನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಪರಿಚಿತರು ಹತ್ಯೆ ಮಾಡಿದ್ದಾರೆ. ಭಾರತಕ್ಕೆ ಬೇಕಾಗಿರುವ ಕುಖ್ಯಾತ ಉಗ್ರರನ್ನು ಪಾಕಿಸ್ತಾನದಲ್ಲಿ ಸರಣಿ ರೂಪದಲ್ಲಿ ಹತ್ಯೆ ಮಾಡುತ್ತಿರುವ ಅಪರಿಚಿತ ವ್ಯಕ್ತಿಗಳು ಮತ್ತೊಮ್ಮೆ ಕಾರ್ಯಾಚರಣೆ ನಡೆಸಿದ್ದು ಮುಜಾಫರಾಬಾದ್‌ನಲ್ಲಿ ಹಂಝಾನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ನಿವಾಸಿಯಾದ ಅರ್ಜುಮಂದ್ ಗುಲ್ವಾರ್ ದಾರ್ ಅಲಿಯಾಸ್ ಹಂಝಾ ಬುರ್ಹಾನ್‌ನನ್ನು 2022ರಲ್ಲಿ ಕೇಂದ್ರ ಗೃಹ ಸಚಿವಾಲಯ ಭಯೋತ್ಪಾದಕ ಎಂದು ಘೋಷಣೆ ಮಾಡಿತ್ತು. ಹಾಗೂ ಈ ಹಂಝಾ ಹುಟ್ಟಿ ಬೆಳೆದದ್ದು ಪುಲ್ವಾಮಾದಲ್ಲಿ. 2017ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪಾಕಿಸ್ತಾನಕ್ಕೆ ತೆರಳುತ್ತಾನೆ. ಅಲ್ಲಿಗೆ ಹೋದ ಕೂಡಲೇ ನಿಷೇಧಿತ ಉಗ್ರಗಾಮಿ ಸಂಘಟನೆಗಳನ್ನು ಸೇರಿ ಕೆಲವೇ ದಿನಗಳಲ್ಲಿ ಕಮಾಂಡ‌ರ್ ಮಟ್ಟಕ್ಕೆ ಬೆಳೆಯುತ್ತಾನೆ. ನಂತರ ಕಾಶ್ಮೀರಕ್ಕೆ ಮರಳಿ, ದಕ್ಷಿಣ ಕಾಶ್ಮೀರದಿಂದ ಶೋಪಿಯಾನ್‌ವರೆಗೂ ತನ್ನ ಉಗ್ರ ಸಂಘಟನೆಯ ಜಾಲವನ್ನು ವಿಸ್ತರಿಸಿ, ಸ್ಥಳೀಯ ಯುವಕರನ್ನು ಉಗ್ರಗಾಮಿ ಸಂಘಟನೆಗೆ ಎಎ ಕೆಲಸದಲ್ಲಿ ತೊಡಗಿದ್ದ ಎನ್ನಲಾಗುತ್ತಿದೆ.

ಕಳೆದ 2019ರಲ್ಲಿ ಫೆಬ್ರವರಿ 14ರಂದು ಜೆಇಎಂ ಉಗ್ರರು ಪುಲ್ವಾಮಾದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿ 40ಕ್ಕೂ ಹೆಚ್ಚು ಸಿಆರ್‌ಪಿಎಫ್‌ ಯೋಧರನ್ನು ಹತ್ಯೆ ಮಾಡಿದ್ದರು. ಈ ದಾಳಿಯಲ್ಲಿ ಆತ್ಮಹತ್ಯಾ ಬಾಂಬರ್‌ಗಳಿಗೆ ಆರ್‌ಡಿಎಕ್ಸ್ ಮತ್ತು ಗ್ರೆನೇಡ್‌ಗಳನ್ನು ಸರಬರಾಜು ಮಾಡಿದ್ದು ಇದೇ ಹಂಝಾ ಎಂದು ಭಾರತದ ಗುಪ್ತಚರ ಇಲಾಖೆ ಹೇಳಿತ್ತು. ಘಟನೆ ಬಳಿಕ ಹಂಝಾನಿಗಾಗಿ ಭಾರತೀಯ ಭದ್ರತಾ ಪಡೆಗಳು ವ್ಯಾಪಕ ಬಲೆ ಬೀಸಿದ್ದವು ಆದರೆ ಹಂಝಾ ತಪ್ಪಿಸಿಕೊಂಡು ಮತ್ತೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಗಿ ನೆಲೆಸಿದ್ದ. ಕಳೆದ ಎರಡು ವರ್ಷಗಳಿಂದ ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಭಾರತದ ವಿರುದ್ಧ ಸಂಚು ರೂಪಿಸುವ ವಿವಿಧ ಉಗ್ರಗಾಮಿ ಸಂಘಟನೆಗಳ ಉನ್ನತಮಟ್ಟದ ಕಮಾಂಡರ್‌ಗಳು ನಿಗೂಢವಾಗಿ ಹತರಾಗುತ್ತಿದ್ದು, ಬುರ್ಹಾನ್ ಹತ್ಯೆ ಈ ಸರಣಿಯ ಹೊಸ ಸೇರ್ಪಡೆಯಾಗಿದೆ ಎಂಬುದ್ದಾಗಿದೆ.