ಮನೆ ಸುದ್ದಿ ಜಾಲ ಕ್ಲಿಯರ್ ಎಡ್ಜ್ ಇದ್ದರೂ ಬಚಾವಾದ ಕೆಎಲ್ ರಾಹುಲ್! ಮೈದಾನದಲ್ಲಿನ ಘಟನೆ ವೈರಲ್

ಕ್ಲಿಯರ್ ಎಡ್ಜ್ ಇದ್ದರೂ ಬಚಾವಾದ ಕೆಎಲ್ ರಾಹುಲ್! ಮೈದಾನದಲ್ಲಿನ ಘಟನೆ ವೈರಲ್

0

ಮುಲ್ಲನ್‌ಪುರ: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟರ್ ಕೆಎಲ್ ರಾಹುಲ್‌ಗೆ ಸಂಬಂಧಿಸಿದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಕಣಕ್ಕಿಳಿದಿದ್ದರು. ಪಂದ್ಯದ 11ನೇ ಓವರ್‌ನಲ್ಲಿ ಅಫ್ಘಾನಿಸ್ತಾನದ ವೇಗಿ ಝಿಯಾವುರ್ ರೆಹಮಾನ್ ಎಸೆದ ಚೆಂಡನ್ನು ಕಟ್ ಮಾಡಲು ಯತ್ನಿಸಿದ ರಾಹುಲ್ ಅವರ ಬ್ಯಾಟ್‌ಗೆ ಚೆಂಡು ಸವರಿದಂತೆ ಕಂಡುಬಂದಿತ್ತು.

ಚೆಂಡು ನೇರವಾಗಿ ವಿಕೆಟ್ ಕೀಪರ್ ಕೈ ಸೇರಿದ್ದರಿಂದ ಅಫ್ಘಾನಿಸ್ತಾನದ ಆಟಗಾರರು ಔಟಿಗಾಗಿ ಬಲವಾದ ಮನವಿ ಮಾಡಿದರು. ಆದರೆ ಫೀಲ್ಡ್ ಅಂಪೈರ್ ಔಟ್ ನೀಡಲಿಲ್ಲ.

ಇದರ ನಂತರ ಡಿಆರ್‌ಎಸ್ ಪಡೆಯಬೇಕೇ ಬೇಡವೇ ಎಂಬ ಗೊಂದಲದಲ್ಲಿ ಅಫ್ಘಾನ್ ನಾಯಕ ಹಶ್ಮತುಲ್ಲಾ ಶಾಹಿದಿ ಹಾಗೂ ವಿಕೆಟ್ ಕೀಪರ್ ಅಫ್ಸರ್ ಜಜಾಯ್, ರಾಹುಲ್ ಅವರ ಪ್ರತಿಕ್ರಿಯೆಯನ್ನು ಗಮನಿಸಿದರು. ರಾಹುಲ್ ಯಾವುದೇ ಎಡ್ಜ್ ಆಗಿಲ್ಲ ಎನ್ನುವಂತೆ ಶಾಂತವಾಗಿ ವರ್ತಿಸಿದ್ದು, ಬ್ಯಾಟ್ ಹ್ಯಾಂಡಲ್‌ನಿಂದಲೇ ಶಬ್ದ ಬಂದಿರಬಹುದು ಎಂಬ ರೀತಿಯಲ್ಲಿ ಸೂಚನೆ ನೀಡಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಕೊನೆಗೆ ಅಫ್ಘಾನಿಸ್ತಾನ ತಂಡ ಡಿಆರ್‌ಎಸ್ ಬಳಸದೇ ನಿರ್ಧಾರ ಕೈಗೊಂಡಿತು. ಆದರೆ ಕೆಲವೇ ಕ್ಷಣಗಳಲ್ಲಿ ಕ್ರೀಡಾಂಗಣದ ಬಿಗ್ ಸ್ಕ್ರೀನ್‌ನಲ್ಲಿ ಪ್ರಸಾರವಾದ ಅಲ್ಟ್ರಾಎಡ್ಜ್ ದೃಶ್ಯದಲ್ಲಿ ಚೆಂಡು ಬ್ಯಾಟ್‌ಗೆ ಸ್ಪರ್ಶಿಸಿರುವುದು ಗೋಚರಿಸಿತು.

ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೆಎಲ್ ರಾಹುಲ್ ಅವರ ನಡೆ ಕುರಿತು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಇದನ್ನು ಆಟದ ಭಾಗ ಎಂದು ಸಮರ್ಥಿಸಿಕೊಂಡರೆ, ಇನ್ನೂ ಕೆಲವರು ಕ್ರೀಡಾಸ್ಫೂರ್ತಿಯ ದೃಷ್ಟಿಯಿಂದ ಪ್ರಶ್ನೆ ಎತ್ತುತ್ತಿದ್ದಾರೆ.