ಮುಂಬೈ: ಮುಂಬರುವ ಜುಲೈ 04ರಿಂದ ಜುಲೈ 23ರವರೆಗೆ ಶ್ರೀಲಂಕಾ ಪ್ರವಾಸಕ್ಕೆ ಇದೀಗ ಭಾರತ ಅಂಡರ್-19 ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಎರಡನೇ ಪುತ್ರ ಅನ್ವಯ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ. ಈ ಮೂಲಕ ತಂದೆಯ ಹಾದಿಯಲ್ಲಿಯೇ ಮಗನ ಪಯಣ ಶುರುವಾಗಿದ್ದು ಶ್ರೀಲಂಕಾ ಪ್ರವಾಸದಲ್ಲಿ ಭಾರತ ಅಂಡರ್-19 ಪುರುಷರ ಕ್ರಿಕೆಟ್ ತಂಡವು ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಎರಡು ಮಲ್ಟಿ ಡೇ ಗೇಮ್‌ಗಳನ್ನು ಆಡಲಿದೆ. ಈ ಎರಡೂ ಸರಣಿಗಳಿಗೆ ಯಶ್‌ಬರ್ಧನ್ ಸಿಂಗ್ ಚೌಹಾಣ್ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಲಕ್ಷ್ಯ ರಾಯಿಚಂದಾನಿ ಉಪನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎನ್ನಲಾಗಿದೆ.

ಹಾಗೂ ಅಂಡರ್-19 ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಗೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಅನ್ವಯ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ಅನ್ವಯ್ ದ್ರಾವಿಡ್ ಮಾತ್ರವಲ್ಲದೇ ರಜತ್ ಭಗೇಲಾ ಕೂಡಾ ವಿಕೆಟ್ ಕೀಪರ್ ಬ್ಯಾಟರ್ ಆಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಮೊದಲು ಸಮಿತ್ ದ್ರಾವಿಡ್ ಕೂಡಾ ಅಂಡರ್-19 ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದರುಎನ್ನಲಾಗಿದೆ. ನಂತರ ಭಾರತ ಅಂಡರ್-19 ಹಾಗೂ ಶ್ರೀಲಂಕಾ ಅಂಡರ್-19 ಮೂರು ಪಂದ್ಯಗಳ ಏಕದಿನ ಸರಣಿಯು ಜುಲೈ 04ರಿಂದ ಆರಂಭವಾಗಲಿದೆ. ಜುಲೈ 04ರಂದು ಹಂಬಾನ್‌ಟೋಟ, ಜುಲೈ 06ರಂದು ಗಾಲೆ ಹಾಗೂ ಜುಲೈ 09ರಂದು ಕೊಲಂಬೋದಲ್ಲಿ ನಡೆಯಲಿದೆ.

ಇನ್ನು ಎರಡು ಪಂದ್ಯಗಳ ಮಲ್ಟಿ ಡೇ ಮ್ಯಾಚ್ ಜುಲೈ 13 ಹಾಗೂ ಜುಲೈ 20ರಂದು ಕ್ರಮವಾಗಿ ನಡೆಯಲಿದೆ. ಯಶ್‌ಬರ್ಧನ್ ಸಿಂಗ್ ಚೌಹಾನ್(ನಾಯಕ), ಲಕ್ಷ್ಯಾ ರಾಯಿಚಂದಾನಿ(ಉಪನಾಯಕ), ಸಾಗರ್ ವಿರಿಕ್, ವಿನೀತ್ ವಿ.ಕೆ, ಅರ್ಜುನ್ ರಜಪೂತ್, ಕುಶಾಗ್ರಾ ಓಜಾ, ರಜತ್ ಭಗೇಲಾ(ವಿಕೆಟ್ ಕೀಪರ್), ಅನ್ವಯ್ ದ್ರಾವಿಡ್(ವಿಕೆಟ್ ಕೀಪರ್), ಅನ್ಮೋಲ್‌ಜೀತ್ ಸಿಂಗ್, ವುಟ್ಕುರಿ ಯಶ್ವೀರ್ ಗೌಡ್, ರೋಹಿತ್ ಅನಿಲ್ ಯಾದವ್, ಶವಿನ್ ವಿ, ಕಾವ್ಯಾ ಪರೇಶ್ ಪಟೇಲ್,ಮೋಹಿತ್ ಉಲ್ವಾ, ಇಶಾನ್ ಸೂದ್ ಎನ್ನಬಹುದ್ದಾಗಿದೆ.















