ಮನೆ ಸುದ್ದಿ ಜಾಲ ಸಿಂಧುಗೆ ಸೋಲು : ಆಸ್ಟ್ರೇಲಿಯನ್ ಓಪನ್ 2026

ಸಿಂಧುಗೆ ಸೋಲು : ಆಸ್ಟ್ರೇಲಿಯನ್ ಓಪನ್ 2026

0

ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್​ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ.ಸಿಂಧು ಜಪಾನ್ ನ ಅಕಾನೆ ಯಮಗುಚಿ ವಿರುದ್ಧ ಸೋಲನ್ನು ಕಂಡು ಟೂರ್ನಿಯಿಂದ ಹೊರಬಿದ್ದು ಸಿಡ್ನಿಯಲ್ಲಿ ಪ್ರಸ್ತುತ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ನಡೆಯುತ್ತಿದೆ. ಇಂದು ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಅಗ್ರ ಆಟಗಾರ್ತಿ ಮತ್ತು ವಿಶ್ವದ 10ನೇ ಶ್ರೇಯಾಂಕಿತೆ ಸಿಂಧು ವಿಶ್ವದ ಮೂರನೇ ಶ್ರೇಯಾಂಕದ ಜಪಾನ್‌ನ ಅಕಾನೆ ಯಮಗುಚಿ ಅವರನ್ನು ಎದುರಿಸಿದರು. 2026ರ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್‌ನಲ್ಲಿ ಸಿಂಧು ಅವರ ಎರಡನೇ ಸೆಮಿಫೈನಲ್ ಇದಾಗಿತ್ತು. ಇದಕ್ಕೂ ಮೊದಲು, ಅವರು ಜನವರಿಯಲ್ಲಿ ನಡೆದ ಮಲೇಷ್ಯಾ ಓಪನ್ ಸೂಪರ್ 1000 ನಲ್ಲೂ ಸೆಮಿಫೈನಲ್ ತಲುಪಿದ್ದರು ಆದರೇ, ಅಲ್ಲಿ ಅವರು ಚೀನಾದ ವಾಂಗ್ ಝಿಯಿ ವಿರುದ್ಧ ಸೋತರು ಎನ್ನಲಾಗಿದೆ.

ಆದರೆ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು ಬಿಡಬ್ಲ್ಯೂಎಫ್ ಸರ್ಕ್ಯೂಟ್‌ನಲ್ಲಿ ಕೊನೆಯಬಾರಿಗೆ 2024 ರಲ್ಲಿ ಲಕ್ನೋದಲ್ಲಿ ನಡೆದ ಸೈಯದ್ ಮೋದಿ ಇಂಟರ್ನ್ಯಾಷನಲ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ತೀವ್ರ ಪೈಪೋಟಿಯ ಆರಂಭಿಕ ಸೆಟ್​ನಲ್ಲಿ ಸಿಂಧು ಉತ್ತಮ ಪ್ರದರ್ಶನ ನೀಡಿ ವಿರಾಮದ ವೇಳೆಗೆ ಮುನ್ನಡೆಯಲ್ಲಿದ್ದರು. ವಿರಾಮದ ನಂತರ, ಯಮಗುಚಿ ಸತತ ಆರು ಅಂಕಗಳನ್ನು ಗಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು, ಆದರೆ ಸಿಂಧು ಮತ್ತೆ ಹೋರಾಡಿ ಆವೇಗವನ್ನು ಮರಳಿ ಪಡೆದ್ದು ಮತ್ತೊಮ್ಮೆ ಮುನ್ನಡೆ ಸಾಧಿಸಿದರು. ಕೊನೆಯ ಕ್ಷಣಗಳವರೆಗೂ ಪಂದ್ಯ ರೋಚಕವಾಗಿತ್ತು ಅಂತಿಮವಾಗಿ ಸಿಂಧು ಮೊದಲ ಸೆಟ್​ 20-19 ಅಂತರಿಂದ ಮೊದಲ ಸೆಟ್​ ಕಳೆದುಕೊಂಡರು. ಎರಡನೇ ಸೆಟ್‌ನಲ್ಲಿ, ಯಮಗುಚಿ ಆರಂಭದಿಂದಲೇ ಪ್ರಾಬಲ್ಯ ಸಾಧಿಸಿ, ಸತತ ಏಳು ಅಂಕಗಳನ್ನು ಗೆದ್ದು 13-6 ಮುನ್ನಡೆ ಸಾಧಿಸಿ ಪಂದ್ಯದ ಮೇಲೆ ತನ್ನ ಹಿಡಿತವನ್ನು ಕಾಯ್ದುಕೊಂಡರು. ಈ ಸೋಲಿನಿಂದ ಸಿಂಧು ಅವರ ಪ್ರಶಸ್ತಿ ಕನಸು ಕೊನೆಗೊಂಡಿತು. ಮತ್ತು ಆಸ್ಟ್ರೇಲಿಯನ್ ಓಪನ್‌ನಿಂದ ಹೊರಬಿದ್ದ ಎಲ್ಲಾ ಭಾರತೀಯ ಆಟಗಾರ್ತಿಯರಲ್ಲಿ ಸಿಂಧು ಮೊದಲಿಗರಾದರು.

ನಾಳೆ ನಡೆಯಲಿರುವ ಫೈನಲ್‌ನಲ್ಲಿ ಜಪಾನ್‌ನ ಅಕಾನೆ ಯಮಗುಚಿ ಥೈಲ್ಯಾಂಡ್‌ನ ಪೋರ್ನ್‌ಪಾವಿ ಚೊಚುವಾಂಗ್​ ಅವರನ್ನು ಎದುರಿಸಲಿದ್ದಾರೆ. ಸಿಂಧು ಅವರ ಸೋಲು ಅಭಿಮಾನಿಗಳಿಗೆ ಭಾರಿ ನಿರಾಶೆಯನ್ನುಂಟು ಮಾಡಿತು. ಭಾರತದ ಮತ್ತೊಬ್ಬ ಯುವ ಆಟಗಾರ್ತಿ ತನ್ವಿ ಶರ್ಮಾ ಕೂಡ ಕ್ವಾರ್ಟರ್ ಫೈನಲ್‌ನಲ್ಲಿ ಯಮಗುಚಿ ವಿರುದ್ಧ ಸೋತಿದ್ದರು. ಹೆಚ್ಚುವರಿಯಾಗಿ, ಭಾರತದ ಸ್ಟಾರ್ ಆಟಗಾರರಾದ ಕಿರಣ್ ಜಾರ್ಜ್ ಮತ್ತು ತರುಣ್ ಮಾನೆಪಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಆಘಾತಕಾರಿ ಸೋಲುಗಳನ್ನು ಅನುಭವಿಸಿದರೆ, ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸಿಂಧು ಮತ್ತು ತನ್ವಿ ಶರ್ಮಾ ಅವರ ಪ್ರದರ್ಶನವು ಅಭಿಮಾನಿಗಳಿಗೆ ಅಸಮಾಧಾನ ಮೂಡಿಸಿದೆ ಎನ್ನಲಾಗಿದೆ.