ಮನೆ ಸುದ್ದಿ ಜಾಲ ಚಿಕ್ಕಮಗಳೂರು : ಪೋಷಕರೊಂದಿಗೆ ಜಗಳವಾಡಿ ಮನೆಬಿಟ್ಟ ಯುವಕ ಶವವಾಗಿ ಪತ್ತೆ

ಚಿಕ್ಕಮಗಳೂರು : ಪೋಷಕರೊಂದಿಗೆ ಜಗಳವಾಡಿ ಮನೆಬಿಟ್ಟ ಯುವಕ ಶವವಾಗಿ ಪತ್ತೆ

0

ಚಿಕ್ಕಮಗಳೂರು : ಚಿಕ್ಕಮಗಳೂರು ತಾಲೂಕಿನ ಬನ್ನೂರು ಗ್ರಾಮದಲ್ಲಿ ಹಣಕ್ಕಾಗಿ ಪೋಷಕರೊಂದಿಗೆ ನಡೆದ ಜಗಳದ ಬಳಿಕ ಮನನೊಂದ ಯುವಕನೊಬ್ಬ ಕೆರೆಗೆ ಹಾರಿ ಆತ್ಮ*ಹ*ತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದ್ದು  ಮೃತ ಯುವಕನನ್ನು 27 ವರ್ಷದ ಪ್ರದೀಪ್ ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಪ್ರದೀಪ್ ಪೋಷಕರ ಬಳಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.

ಆದರೆ, ದುಡಿದು ಸಂಪಾದಿಸುವಂತೆ ಸಲಹೆ ನೀಡಿದ ಪೋಷಕರು ಹಣ ನೀಡಲು ನಿರಾಕರಿಸಿದ್ದರು. ಇದರ ನಡುವೆಯೇ, ಸಂಘದಿಂದ ಸಾಲ ಮಾಡಿಕೊಡುವಂತೆ ಪ್ರದೀಪ್ ಒತ್ತಾಯಿಸಿದ್ದು, ಅದಕ್ಕೂ ಪೋಷಕರು ಒಪ್ಪದ ಹಿನ್ನೆಲೆಯಲ್ಲಿ ಮನೆಯಲ್ಲಿ ಮಾತಿನ ಚಕಮಕಿ ನಡೆದಿದೆ. ಜಗಳದ ಬಳಿಕ ಆಕ್ರೋಶದಿಂದ ಮನೆಯಿಂದ ಹೊರನಡೆದಿದ್ದ ಪ್ರದೀಪ್, ಬಳಿಕ ನಾಪತ್ತೆಯಾಗಿದ್ದ.

ಹಾಗೂ ನಂತರ ಗ್ರಾಮದ ಸಮೀಪದ ಕಾಫಿ ತೋಟದ ಕೆರೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಸ್ಥಳೀಯ ಈಜುಗಾರರ ನೆರವಿನಿಂದ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಘಟನೆ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.