ಮನೆ ಅಂತರಾಷ್ಟ್ರೀಯ ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಗೊಟಬಯ ರಾಜಪಕ್ಸ

ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಗೊಟಬಯ ರಾಜಪಕ್ಸ

0

ಕೊಲಂಬೊ (Colombo): ಶ್ರೀಲಂಕಾದಿಂದ ಪರಾರಿಯಾಗಿದ್ದ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸಿಂಗಾಪುರದಲ್ಲಿ ತಂಗಿರುವ ರಾಜಪಕ್ಸ ಶ್ರೀಲಂಕಾ ಸಂಸತ್ತಿನ ಸ್ಪೀಕರ್‌ಗೆ ಇ–ಮೇಲ್‌ ಮೂಲಕ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.

ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದ್ದ ರಾಜಪಕ್ಸ ಶ್ರೀಲಂಕಾದಿಂದ ಪರಾರಿಯಾಗಿ ಮಾಲ್ಡೀವ್‌ನಲ್ಲಿ ತಂಗಿದ್ದರು. ಮಾಲ್ಡೀವ್‌ನಲ್ಲಿಯೂ ಪ್ರತಿಭಟನೆಯನ್ನು ಎದುರಿಸಿದ ಅವರು ಈಗ ಸಿಂಗಾಪುರಕ್ಕೆ ಹಾರಿದ್ದಾರೆ.

ಇತ್ತ ಶ್ರೀಲಂಕಾದಲ್ಲಿ ರಾಜಪಕ್ಸ ರಾಜೀನಾಮೆಗೆ ಒತ್ತಾಯಿಸಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿತ್ತು. ದರೋಡೆಕೋರರನ್ನು ನಿಮ್ಮ ದೇಶದಲ್ಲಿ ನೆಲೆಸಲು ಬಿಡಬೇಡಿ ಎಂದು ಸಿಂಗಾಪುರ ನಾಗರಿಕರಿಗೆ ಶ್ರೀಲಂಕಾ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಶ್ರೀಲಂಕಾದಲ್ಲಿ ಅರಾಜಕತೆ ಮನೆಮಾಡಿದೆ.