ಮನೆ ರಾಜ್ಯ ಮದುವೆ ಆರತಕ್ಷತೆಯಲ್ಲೇ ಹೃದಯಾಘಾತದಿಂದ ವರ ಸಾವು

ಮದುವೆ ಆರತಕ್ಷತೆಯಲ್ಲೇ ಹೃದಯಾಘಾತದಿಂದ ವರ ಸಾವು

0

ಹೊಸಪೇಟೆ(Hosapete): ಮದುವೆ ಆರತಕ್ಷತೆ ನಡೆಯುವ ಸಂದರ್ಭದಲ್ಲಿ ವರ ಹೃದಯಾಘಾತದಿಂದ ಸಾವನ್ನಪಿರುವ ಘಟನೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹೊನ್ನೂರ ಸ್ವಾಮಿ (26) ಮೃತಪಟ್ಟವರು.

ಆರತಕ್ಷತೆ ಮಧ್ಯೆ ಎದೆ ನೋವಿನಿಂದ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ವರನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ನಂತರ ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ಸಲಹೆ ನೀಡಿದ್ದು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ವರ ಹೊನ್ನೂರಸ್ವಾಮಿ ಸಾವನ್ನಪ್ಪಿದ್ದಾರೆ. ಮದುವೆಯ ಸಂಭ್ರಮದ ಮನೆಯಲ್ಲಿ ಸೂತಕದ ವಾತಾವರಣ ಆವರಿಸಿದೆ.