ಮನೆ ಅಪರಾಧ ಭಟ್ಕಳದಲ್ಲಿ 8 ವರ್ಷದ ಬಾಲಕನ ಅಪಹರಣ

ಭಟ್ಕಳದಲ್ಲಿ 8 ವರ್ಷದ ಬಾಲಕನ ಅಪಹರಣ

0

ಭಟ್ಕಳ (Bhatkal): ಅಂಗಡಿಯಿಂದ ಮನೆಗೆ ಮರಳುತ್ತಿದ್ದ 8 ವರ್ಷದ ಬಾಲಕನನ್ನು ದುಷ್ಕರ್ಮಿಗಳು ಅಪಹರಿಸಿರುವ ಘಟನೆ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ಕೊಕ್ತಿ ಆಜಾದ ನಗರ ನಿವಾಸಿ ಅಲಿ ಸಾದಾ ಇಸ್ಲಾಂ ಸಾದಾ ಅಪಹರಣವಾಗಿರುವ ಬಾಲಕ. ಬಾಲಕ ಅಂಗಡಿಯಿಂದ ಬ್ರೆಡ್‌ ಖರೀದಿ ಮಾಡಿ ಮನೆಗೆ ಮರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಆತನನ್ನು ಅಪಹರಿಸಿದ್ದಾರೆ. ಈತನ ತಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.

ಶನಿವಾರ ಸಂಜೆಯಿಂದ ಬಾಲಕನ ಮನೆ ಮುಂದೆ ಅಪರಿಚಿತ ಕಾರೊಂದು ಸಂಚರಿಸುತ್ತಿದ್ದ ದೃಶ್ಯ ಹಾಗೂ ಕಾರಿನಲ್ಲಿ ಬಾಲಕನನ್ನು ಅಪಹರಣ ಮಾಡಿಕೊಂಡು ಹೋಗಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಭಟ್ಕಳ ಶಹರ ಠಾಣೆ ಸಿ.ಪಿ.ಐ ದಿವಾಕರ ಅವರ ನೇತೃತ್ವದಲ್ಲಿ ಬಾಲಕನ ರಕ್ಷಣೆಗೆ ಹಾಗೂ ಅಪಹರಣಕಾರರ ಪತ್ತೆಗೆ ಹುಡುಕಾಟ ಆರಂಭವಾಗಿದೆ.