ಮನೆ ರಾಷ್ಟ್ರೀಯ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ

ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ

0

ಚೆನ್ನೈ(Chennai): ಚೆನ್ನೈನಿಂದ ದುಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಸ್ಫೋಟಕ ಇಡಲಾಗಿದೆ ಎಂದು ವ್ಯಕ್ತಿಯಿಂದ ಪೊಲೀಸ್​ ಕಂಟ್ರೋಲ್​ ರೂಂಗೆ ಅನಾಮಧೇಯ ಕರೆ ಬಂದಿದೆ.

ತಕ್ಷಣವೇ ಎಚ್ಚೆತ್ತ ಪೊಲೀಸರು ಈ ಬಗ್ಗೆ ವಿಮಾನ ನಿಲ್ದಾಣ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಚೆನ್ನೈನಿಂದ ದುಬೈಗೆ 7.20 ಕ್ಕೆ ಹೊರಡಲು ಸಿದ್ಧವಾಗಿದ್ದ ಇಂಡಿಗೋ ವಿಮಾನವನ್ನು ತಾತ್ಕಾಲಿಕವಾಗಿ ತಡೆದು ಭದ್ರತಾ ಏಜೆನ್ಸಿಗಳು ಶೋಧ ನಡೆಸಿದವು.

ಈ ವಿಮಾನದಲ್ಲಿ 160 ಜನರು ಪಯಣ ಬೆಳೆಸಿದ್ದರು. ಕರೆ ಮಾಡಿ ಬಾಂಬ್​ ಬೆದರಿಕೆ ಹಾಕಿದವರ ಪತ್ತೆಗಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.