ಮನೆ ಮನರಂಜನೆ ನಟ ರಮೇಶ್ ಅರವಿಂದ್ ಜನ್ಮದಿನ: ಶಿವಾಜಿ ಸುರತ್ಕಲ್-2 ಟೀಸರ್ ಬಿಡುಗಡೆ ಮಾಡಿದ ಚಿತ್ರತಂಡ

ನಟ ರಮೇಶ್ ಅರವಿಂದ್ ಜನ್ಮದಿನ: ಶಿವಾಜಿ ಸುರತ್ಕಲ್-2 ಟೀಸರ್ ಬಿಡುಗಡೆ ಮಾಡಿದ ಚಿತ್ರತಂಡ

0

ನಟ ಮತ್ತು ನಿರ್ದೇಶಕ ರಮೇಶ್ ಅರವಿಂದ್ ಇಂದು 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹೀಗೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಮೇಶ್ ಅರವಿಂದ್ ಅವರಿಗೆ ಶಿವಾಜಿ ಸುರತ್ಕಲ್ 2 ಚಿತ್ರತಂಡ ಟೀಸರ್ ಅನ್ನು ಗಿಫ್ಟ್ ಆಗಿ ನೀಡಿದೆ.

ಶಿವಾಜಿ ಸೂರತ್ಕಲ್ 2 ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು, ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. 2020ರಲ್ಲಿ ಬಿಡುಗಡೆಯಾಗಿದ್ದ ಶಿವಾಜಿ ಸುರತ್ಕಲ್ ಕೇಸ್ ಆಫ್ ರಣಗಿರಿ ರಹಸ್ಯ ಯಶಸ್ಸು ಸಾಧಿಸಿದ ನಂತರ ಇದೀಗ ಈ ಚಿತ್ರದ ಸೀಕ್ವೆಲ್ ಆಗಿ ಶಿವಾಜಿ ಸೂರತ್ಕಲ್ 2 ಚಿತ್ರವನ್ನು ನಿರ್ಮಾಣ ಮಾಡಲಾಗ್ತಿದೆ. ಈ ಚಿತ್ರದ ಟ್ಯಾಗ್ ಲೈನ್ ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ ಎಂದಿದ್ದು, ಕುತೂಹಲವನ್ನು ಹೆಚ್ಚಿಸಿದೆ.

ಕಿರುತೆರೆ, ಬೆಳ್ಳಿತೆರೆ ಎರಡರಲ್ಲೂ ಬ್ಯುಸಿಯಾಗಿರುವ ನಟ ರಮೇಶ್ ಅರವಿಂದ್ 1964ರ ಸೆಪ್ಟೆಂಬರ್​ 10ರಂದು ತಮಿಳುನಾಡಿನ ಕುಂಭಕೋಣಂನಲ್ಲಿ ಗೋವಿಂದಚಾರಿ ಅರವಿಂದ್ ಮತ್ತು ಸರೋಜಾ ಅವರ ಪುತ್ರನಾಗಿ ಜನಿಸಿದರು. 1991ರಲ್ಲಿ ಅರ್ಚನಾ ಅವರನ್ನು ಮದುವೆಯಾದ ಅವರು ನಿಹಾರಿಕಾ ಮತ್ತು ಅರ್ಜುನ್​​ ಎಂಬ ಇಬ್ಬರು ಮಕ್ಕಳನ್ನೊಳಗೊಂಡ ಸುಂದರ ಕುಟುಂಬ ಹೊಂದಿದ್ದಾರೆ.

ಇವರು ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಪ್ರತಿಭಾನ್ವಿತ ನಟ. ಇದರ ಜೊತೆಗೆ ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿಯೂ ಸೇರಿ ಒಟ್ಟು ಆರು ಭಾಷೆಗಳ ಚಿತ್ರರರಂಗದಲ್ಲಿ ಕೆಲಸ ಮಾಡಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು 34 ವರ್ಷಗಳಾಗಿದ್ದು ಸುಮಾರು 140 ಸಿನಿಮಾಗಳಲ್ಲಿ ಅಭಿನಯಿಸಿರುವುದು ಹೆಮ್ಮೆಯ ವಿಷಯ. ಕಿರುತೆರೆಯಲ್ಲಿ ಪ್ರಸಾರವಾದ ವೀಕೆಂಡ್ ವಿತ್ ರಮೇಶ್ ಶೋ ನಿರೂಪಿಸಿ ಭೇಷ್ ಎನಿಸಿಕೊಂಡಿದ್ದಾರೆ.

ವೃತ್ತಿ ಜೀವನಕ್ಕೆ ಕಾಲಿಟ್ಟು ಸತಿ ಲೀಲಾವತಿ, ಡ್ಯುಎಟ್, ಅಮೇರಿಕಾ ಅಮೇರಿಕಾ, ನಮ್ಮೂರ ಮಂದಾರ ಹೂವೆ, ಆಪ್ತಮಿತ್ರ, ಉಲ್ಟಾ ಪಲ್ಟಾ, ಹೂಮಳೆ, ಚಂದ್ರಮುಖಿ ಪ್ರಾಣಸಖಿ, ರಾಮ ಶಾಮ ಭಾಮ, ಕೋತಿಗಳು ಸಾರ್ ಕೋತಿಗಳು, ಕತ್ತೆಗಳು ಸಾರ್ ಕತ್ತೆಗಳು, ಶಿವಾಜಿ ಸುರತ್ಕಲ್, ಅನುರಾಗ ಸಂಗಮ ಮತ್ತು ಅಮೃತವರ್ಷಿಣಿ ಅಂತಹ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದಾರೆ. ಅತ್ಯುತ್ತಮ ನಟ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗನ್ನು ಮುಡಿಗೇರಿಸಿಕೊಂಡಿದ್ದಾರೆ.