ಮನೆ ಕ್ರೀಡೆ ಭಾರತದ ಹಾಕಿ ತಂಡದ ಅಧ್ಯಕ್ಷರಾಗಿ ದಿಲೀಪ್ ಟಿರ್ಕಿ ನೇಮಕ

ಭಾರತದ ಹಾಕಿ ತಂಡದ ಅಧ್ಯಕ್ಷರಾಗಿ ದಿಲೀಪ್ ಟಿರ್ಕಿ ನೇಮಕ

0

ನವದೆಹಲಿ(Newdelhi): ಹಾಕಿ ಇಂಡಿಯಾದ ಅಧ್ಯಕ್ಷರಾಗಿ ದಿಲೀಪ್ ಕುಮಾರ್ ಟಿರ್ಕಿ ಅವರು ಆಯ್ಕೆಯಾಗಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, ಭಾರತೀಯ ಹಾಕಿಯನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಿಲೀಪ್ ಟಿರ್ಕಿ, ರಾಷ್ಟ್ರೀಯ ತಂಡದ ಮಾಜಿ ನಾಯಕ, ಅತಿ ಹೆಚ್ಚು ಪಂದ್ಯಗಳನ್ನಾಡಿದ ಭಾರತದ ಅಂತಾರಾಷ್ಟ್ರೀಯ ಆಟಗಾರರಲ್ಲಿ ಒಬ್ಬರಾಗಿದ್ದು, ಹಾಕಿ ಇಂಡಿಯಾ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.