ಮನೆ ಹಾಸ್ಯ ಹಾಸ್ಯ ಚಟಾಕಿ

ಹಾಸ್ಯ ಚಟಾಕಿ

0

ದೇವರು ದೊಡ್ಡವನು

ನಾಳೆ ಹೇಗಿದ್ದರೂ ರಜೆ.. ಸರಿ ಅಂತ ಒಂದು ಫುಲ್ ಬಾಟಲ್ ತಗೊಂಡು ಸ್ಕೂಟಿಯಲ್ಲಿ ಮನೆಗೆ ಹೊರಟೆ.
ಸ್ವಲ್ಪ ದೂರ ಹೋಗುವಷ್ಟಲ್ಲಿ ಒಂದು ಆಲೋಚನೆ ಬಂತು, ಅಕಸ್ಮಾತ್ ಈ ಸ್ಕೂಟಿ ಏನಾದರೂ ಜಾರಿ ಕೆಳಗೆ ಬಿದ್ದರೆ, ಬಾಟಲ್ ಒಡೆದು ಹೋದರೆ ಮನೆಗೆ ಹೋಗಿ ಏನು ಕುಡಿಯುವುದು? ಯೋಜನೆ ಮಾಡಿ ಸ್ಕೂಟಿ ಸೈಡ್ ಗೆ ನಿಲ್ಲಿಸಿ ಬಾಟ್ಲಿ ಖಾಲಿ ಮಾಡಿದೆ.
ನೀವು ನಂಬಲ್ಲ ನನ್ನ ಯೋಚನೆ ಸರಿಯಾಗಿತ್ತು, ಮನೆಗೆ ಹೋಗುವಷ್ಟರಲ್ಲಿ ಸ್ಕೂಟಿ ನಾಲ್ಕು ಸಲ ಬಿದ್ದು ಹೊರಳಾಡಿತ್ತು. ಯಪ್ಪಾ ಮೊದಲೇ ಕುಡಿದು ಮುಗಿಸಿದ್ದಕ್ಕೆ ಬಚಾವಾದೆ. ದೇವರು ದೊಡ್ಡವನು!

ಮಗ ಗಲಾಟೆ ಮಾಡ್ತಾನೆ
ಶಿಕ್ಷಕಿ: ನಿಮ್ಮ ಮಗ ಶಾಲೆಯಲ್ಲಿ ತುಂಬಾ ಗಲಾಟೆ ಮಾಡ್ತಾನೆ. ನಾಳೆ ಶಾಲೆಗೆ ಬನ್ನಿ
ತಂದೆ: ಅವನು ಮನೆಯಲ್ಲಿಯೂ ತುಂಬಾ ಗಲಾಟೆ ಮಾಡ್ತಾನೆ ಮೇಡಂ.. ಹಾಗಂತ ನಾನೇದ್ರೂ ನಿಮ್ಮನ್ನ ಮನೆಗೆ ಬನ್ನಿ ಅಂತಾ ಯಾವತ್ತಾದ್ರೂ ಕರೆದಿದ್ದೇನಾ?.. ಹೇಳಿ!!

ಇದೇ ಖುಷಿಗೆ ಪಾಯಸ ಮಾಡುತ್ತೇನೆ
ಮೂರ್ ದಿನ ಆಗಿತ್ತು. ಹೆಂಡತಿ ಗಂಡನ ಜೊತೆ ಠೂ ಬಿಟ್ಟು… ಎಷ್ಟೂಂತ ಬಾಯಿ ಮುಚ್ಕೊಂಡಿರಕ್ಕಾಗುತ್ತೆ ಹೆಂಡತಿ. ಬಾಯಿ ನೋಯಕ್ಕೆ ಶುರುವಾಯ್ತು.
ಕಡೆಗೆ ಹೆಂಡತಿ ಅಂದ್ಲು: “ಏನೋ ಗಂಡ ಹೆಂಡತಿ ಅಂದ್ರೆ ಒಂದ್ ಮಾತು ಬರುತ್ತೆ ಹೋಗುತ್ತೆ. ಅದಕ್ಕೇ ಇಷ್ಟ್ ದಿನ ಬಾಯ್ಮುಚ್ಕೊಂಡಿರ್ಬೇಕಾ? ಇವಾಗ ನಾನು ಹತ್ತರವರೆಗೂ ಎಣಿಸ್ತೀನಿ. ಮಾತಾಡಿಲ್ಲಾಂದ್ರೆ ನಮ್ಮಮ್ಮನ ಮನೆಗೆ ಹೋಗ್ತೀನಿ ಅಷ್ಟೇ”
ಹತ್ ನಿಮಿಷ ಆದ್ರೂ ಗಂಡ ಕಿಮಕ್ಕನ್ಲಿಲ್ಲ.
ಹೆಂಡತಿ ಎಣಿಸೋಕೆ ಶುರು ಹಚ್ಕೊಂಡ್ಲು.
ಒನ್… ಟೂ… ಥ್ರೀ… ಉಹೂಂ.
ಗಂಡ ಗಪ್ ಚುಪ್
ಹೆಂಡತಿ ಹತ್ತು ನಿಮಿಷ ಬಿಟ್ಟು…
ಫೋರ್.. ಫೈವ್… ಗಂಡ… ಉಹೂಂ.
ಬಾಯಿ ಬಿಡಲಿಲ್ಲ.
ಸಿಕ್ಸ್… ಸೆವೆನ್..
(ಗಂಡ ಒಳಗೊಳಗೇ ಹಿಗ್ಗಿ ಹೀರೇಕಾಯಿ ಆಗಿದ್ದರೂ ತೋರಿಸಿಕೊಳ್ಳಲಿಲ್ಲ).
ಕ್ಲೈಮ್ಯಾಕ್ಸು…. ಏಯ್ಟ್ ಅಂದ್ಲು ಹೆಂಡತಿ. ಉಹೂಂ.. ಗಂಡ ಚುಪ್ ಚಾಪ್. ನೈನ್.. (ಗಂಡಂಗೆ ಎದ್ದು ಕುಣಿಯೋಷ್ಟು ಖುಷಿ).
ಹೆಂಡತಿ ಏನ್ಮಾಡಿದ್ಲು ಅಂದ್ರೆ… ಬಾಯಿ ಬಿಡಲಿಲ್ಲ. ಹೆಂಡತಿ ಈಗ ಫುಲ್ ಸೈಲೆಂಟು. ಗಂಡಂಗೆ ಟೆನ್ಷನ್ನಾಗೋಯ್ತು.
ಹತ್ತು ನಿಮಿಷ ಕಾದು ತಡೆಯೋಕಾಗ್ದೆ, ” ಲೇಯ್.. ಯಾಕೆ ನಿಲ್ಲಿಸ್ದೆ?? ಎಣಿಸೂ.. ಟೆನ್ ಅಂತ್ಹೇಳು” ಅಂದ.
ಹೆಂಡತಿ ಅಂದ್ಲು. “ಅಬ್ಬಾ!! ದೇವ್ರು ದೊಡ್ಡೋನು ಕಂಡ್ರೀ…. ಬಾಯಿ ಬಿಟ್ರಿ. ಇಲ್ದಿದ್ದರೆ ನಮ್ಮಮ್ಮನ ಮನೆಗೆ ಹೋಗ್ತಿದ್ದೆ. ಪಾಪ ನಿಮಗೆಷ್ಟು ತೊಂದರೆ ಆಗ್ತಿತ್ತು!!!
ತಾಳಿ ಇದೇ ಖುಷೀಲಿ ಪಾಯಸ ಮಾಡ್ತೀನಿ” ಅಂತ ಕಿಚನ್ನಿಗೆ ಹೋದ್ಲು…
ಗಂಡ ಈ ಘಟನೆಯನ್ನು ತನ್ನ ಆತ್ಮಚರಿತ್ರೆಯಲ್ಲಿ “ತಾಳ್ಮೆ ಕಳೆದುಕೊಳ್ಳುವುದರಿಂದ ಆಗುವ ಅನಾಹುತಗಳು” ಅಧ್ಯಾಯದಲ್ಲಿ ಸೇರಿಸಲಿದ್ದಾನಂತೆ.