ಸೌದಿ ಅರೇಬಿಯಾ: ಭಾರತ ತಂಡದವರು ಎಎಫ್ಸಿ 17 ವರ್ಷದೊಳಗಿನವರ ಏಷ್ಯಾ ಕಪ್ ಫುಟ್ಬಾಲ್ ಅರ್ಹತಾ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ.
ಗುರುವಾರ ನಡೆದ ಪಂದ್ಯದಲ್ಲಿ ಭಾರತ 3–0 ಗೋಲುಗಳಿಂದ ಕುವೈತ್ ತಂಡವನ್ನು ಪರಾಭವಗೊಳಿಸಿತು. ಮೊದಲ ಪಂದ್ಯದಲ್ಲಿ ಭಾರತ 5–0 ರಲ್ಲಿ ಮಾಲ್ಡೀವ್ಸ್ ಎದುರು ಗೆದ್ದಿತ್ತು.ತಾಂಗ್ಲಾಲ್ಸುನ್ ಗಾಂಗ್ಟೆ (16 ಮತ್ತು 70ನೇ ನಿ.) ಅವರು ಎರಡು ಗೋಲುಗಳನ್ನು ಗಳಿಸಿ ಭಾರತದ ಗೆಲುವಿನ ರೂವಾರಿ ಎನಿಸಿಕೊಂಡರು.
ಮತ್ತೊಂದು ಗೋಲನ್ನು ಕೊರೊ ಸಿಂಗ್ ತಿಂಗುಜಮ್ (66ನೇ ನಿ.) ಗಳಿಸಿದರು. ಈ ಗೆಲುವಿನ ಮೂಲಕ ಬಿಬಿಯಾನೊ ಫೆರ್ನಾಂಡೆಸ್ ಬಳಗ ಮೂರು ಪಾಯಿಂಟ್ ಕಲೆಹಾಕಿತು.
ಭಾರತ ತಂಡದ ಗೋಲ್ಕೀಪರ್ ಸಾಹಿಲ್ ಅವರು ಎದುರಾಳಿ ತಂಡದ ಗೋಲು ಗಳಿಸುವ ಹಲವು ಪ್ರಯತ್ನಗಳನ್ನು ತಡೆದು ಮಿಂಚಿದರು.
ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ಮಯನ್ಮಾರ್ ಎದುರು ಪೈಪೋಟಿ ನಡೆಸಲಿದೆ.
ಬಾಗಲಕೋಟೆಯಲ್ಲಿ ಬೃಹತ್ ಮೊಸಳೆಯ ರಕ್ಷಣೆ
ಡಿಕೆಶಿ ವಿರುದ್ಧ ದೇವರಾಜೇಗೌಡ ಇನ್ನೊಂದು ಬಾಂಬ್…!
ಸೋಮವಾರ ಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ
ಅಭಿವೃದ್ಧಿಗೆ ಮತ ನೀಡಿ ಎಂದ ರಶ್ಮಿಕ ಮಂದಣ್ಣ
SSLCಗೆ ಇನ್ನಿರಲ ಗ್ರೇಸ್ ಮಾರ್ಕ್ಸ್
ಕಾಫಿ ನಾಡಿನಲ್ಲಿ ಮಳೆಯ ಅಬ್ಬರ
T20 ವಿಶ್ವಕಪ್ ನಲ್ಲಿ ಕನ್ನಡ ರಾರಾಜಿಸಲಿದೆ.
ಕೆಎಸ್ಆರ್ಟಿಸಿ ಬಸ್ನ ಕಿಟಕಿಯಲ್ಲಿ ಮಹಿಳೆಯ ತಲೆ ಲಾಕ್.
ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ….
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.