ಮನೆ ರಾಜಕೀಯ ಮುಂದಿನ 5 ವರ್ಷ ನಾನೇ ಶಾಸಕನಾಗಿರುತ್ತೇನೆ: ಎಸ್.ಆರ್ ಶ್ರೀನಿವಾಸ್ ವಿಶ್ವಾಸ

ಮುಂದಿನ 5 ವರ್ಷ ನಾನೇ ಶಾಸಕನಾಗಿರುತ್ತೇನೆ: ಎಸ್.ಆರ್ ಶ್ರೀನಿವಾಸ್ ವಿಶ್ವಾಸ

0

ತುಮಕೂರು(Tumkur): ನಮ್ಮಪ್ಪನಾಣೆ ಮುಂದಿನ 5 ವರ್ಷ ನಾನೇ ಶಾಸಕನಾಗಿರುತ್ತೇನೆ. ನನ್ನನ್ನ ಸುಲಭವಾಗಿ ಸೋಲಿಸುತ್ತೇನೆ ಅಂದುಕೊಂಡರೇ ಸಾಧ್ಯವಿಲ್ಲ ಎಂದು ಜೆಡಿಎಸ್ ಉಚ್ಛಾಟಿತ ಶಾಸಕ ಎಸ್.ಆರ್ ಶ್ರೀನಿವಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಕುಂಡಲಿ ಯಾರ ಊಹೆಗೂ ನಿಲುಕದ್ದು ಚುನಾವಣೆ ಹತ್ತಿರ ಬಂದಾಗ ಕಾಗೆ ಗೂಬೆಗಳೆಲ್ಲಾ ಬರುತ್ತವೆ. ಕಾಗೆ ಗೂಬೆಗಳೆಲ್ಲಾ ವೇಷ ಹಾಕಿಕೊಂಡು ಬರುತ್ತವೆ. ಜಿ,ಪಂ ಸದಸ್ಯನಾದ ಮೇಲೆ ಶಾಸಕನಾದೋನು ನಾನು. ನಮ್ಮಪ್ಪನಾಣೆ ನಾನೇ ಮುಂದಿನ 5 ವರ್ಷ ಶಾಸಕನಾಗಿರುತ್ತೇನೆ. ನನ್ನ ಸುಲಭವಾಗಿ ಸೋಲಿಸುತ್ತೇನೆ ಅಂದುಕೊಂಡರೇ ಅದು ಸಾಧ್ಯವಿಲ್ಲ ಎಂದಿದ್ದಾರೆ.