ಮನೆ ಆರೋಗ್ಯ ಹೂಕೋಸಿನ ಎಲೆಗಳಿಂದ ಆರೋಗ್ಯ ವೃದ್ಧಿ

ಹೂಕೋಸಿನ ಎಲೆಗಳಿಂದ ಆರೋಗ್ಯ ವೃದ್ಧಿ

0

ನಮಗೆ ಆರೋಗ್ಯ ಯಾವ ಆಹಾರ ಪದಾರ್ಥಗಳಿಂದ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಾವುದಾದರೊಂದು ರೂಪದಲ್ಲಿ ನಮಗೆ ಗೊತ್ತಿಲ್ಲದೆ ನಮ್ಮ ಕಣ್ಣೆದುರಿಗೆ ಇರುವ ಹಣ್ಣು ತರಕಾರಿಗಳಲ್ಲಿ ಸಿಗುತ್ತದೆ. ಕೆಲವೊಂದನ್ನು ನಾವು ತಿನ್ನುತ್ತೇವೆ ಇನ್ನು ಕೆಲವನ್ನು ಇದು ಉಪಯೋಗಕ್ಕೆ ಬರುವುದಿಲ್ಲ ಎನ್ನುವ ಕಾರಣಕ್ಕೆ ಹೊರಗಡೆ ಬಿಸಾಡುತ್ತೇವೆ.

ಆದರೆ ಕೆಲವೊಂದು ಆಹಾರ ಪದಾರ್ಥಗಳು ನಮಗೆ ಪ್ರಯೋಜನಕಾರಿ ಎಂಬ ಸತ್ಯವೇ ನಮಗೆ ಗೊತ್ತಿರುವುದಿಲ್ಲ. ಅಂತಹ ಲಿಸ್ಟ್ ನಲ್ಲಿ ಹೂಕೋಸಿನ ಎಲೆಗಳು ಸಹ ಸೇರಿವೆ. ಹೂಕೋಸಿನ ಎಲೆ ಗಳನ್ನು ಬಿಸಾಡಬಾರದು. ಅವುಗಳು ಚೆನ್ನಾಗಿದ್ದರೆ ತಿನ್ನಬಹುದು ಮತ್ತು ಆರೋಗ್ಯ ವೃದ್ಧಿಸಿಕೊಳ್ಳಬಹುದು.

ಹೂಕೋಸಿನಲ್ಲಿ ಪೌಷ್ಟಿಕಾಂಶಗಳ ಪ್ರಮಾಣ ಇದೆ

ಉತ್ತರ ಭಾರತದಲ್ಲಿ ನಡೆದ ಒಂದು ಅಧ್ಯಯನದಲ್ಲಿ ಹೇಳುವ ಹಾಗೆ, ಮಕ್ಕಳ ಆಹಾರ ಪದ್ಧತಿಯಲ್ಲಿ ಹೂಕೋಸಿನ ಎಲೆಗಳನ್ನು ಯಾವುದಾದರೊಂದು ರೂಪದಲ್ಲಿ ಸೇರಿಸಿದ ನಂತರ ಅವರ ದೇಹದ ಪೌಷ್ಟಿಕಾಂಶದ ಪ್ರಮಾಣ, ತೂಕ, ಎತ್ತರ, ಹಿಮೋಗ್ಲೋಬಿನ್ ಮಟ್ಟ, ಸೀರಂ ರೆಟಿನಾಲ್ ಎಲ್ಲವೂ ಸಹ ಹೆಚ್ಚಾದ ಬಗ್ಗೆ ಮಾಹಿತಿ ಸಿಕ್ಕಿದೆ.

ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಅಧಿಕ ಪ್ರಮಾಣದಲ್ಲಿದೆ…

• ಹೂಕೋಸಿನ ಎಲೆಗಳು ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶವನ್ನು ಹೆಚ್ಚಾಗಿ ಒಳಗೊಂಡಿದೆ. ಬೇರೆ ತರಕಾರಿಗಳಿಗೆ ಹೋಲಿಸಿದರೆ ಹೂಕೋಸಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ತುಂಬಾ ಇದೆ. ನಾರಿನಾಂಶ ಕೂಡ ಅಪಾರ ಪ್ರಮಾಣದಲ್ಲಿ ಇದರಲ್ಲಿ ಕಂಡುಬರುತ್ತದೆ.

• ಆರೋಗ್ಯಕರ ಮೂಳೆಗಳಿಗೆ ಮತ್ತು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇವುಗಳು ನೆರವಾಗುತ್ತವೆ. ನಿಮ್ಮ ದೇಹದ ಜೀರ್ಣ ಶಕ್ತಿಯನ್ನು ಅಭಿವೃದ್ಧಿ ಪಡಿಸಿ ನಿಮ್ಮ ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಇವುಗಳ ಪಾತ್ರ ತುಂಬಾ ದೊಡ್ಡದು. 100 ಗ್ರಾಂ ಹೂಕೋಸಿನ ಎಲೆಗಳು ತಮ್ಮಲ್ಲಿ 600 ಮಿಲಿಗ್ರಾಂ ಕ್ಯಾಲ್ಸಿಯಂ ಹೊಂದಿರುತ್ತವೆ.

• ಯಾರಿಗೆ ಡೈರಿ ಉತ್ಪನ್ನಗಳು ಅಲರ್ಜಿ ಎನಿಸುತ್ತವೆ ಅಂತಹವರು ತಮ್ಮ ದೇಹದ ಕ್ಯಾಲ್ಸಿಯಂ ಸಮತೋಲನ ಮಾಡಿಕೊಳ್ಳಲು ಹೂಕೋಸಿನ ಎಲೆಗಳನ್ನು ತಮ್ಮ ಆಹಾರಪದ್ಧತಿಯಲ್ಲಿ ಸೇರಿಸಿ ಸೇವಿಸಬಹುದು.

ಸರಿಯಾದ ರೀತಿ ಎಲೆಗಳನ್ನು ಆಯ್ಕೆಮಾಡಿಕೊಳ್ಳಬೇಕು

• ಹೂಕೋಸಿನ ಎಲೆಗಳನ್ನು ಆಯ್ಕೆ ಮಾಡಿಕೊಳ್ಳುವಾಗ ನಿಮ್ಮ ಬುದ್ಧಿವಂತಿಕೆ ಬಳಕೆಗೆ ಬರುತ್ತದೆ. ದಟ್ಟ ಹಸಿರಾದ ಹೊಳಪಿನ ಮತ್ತು ಶುದ್ಧವಾದ ಎಲೆಗಳನ್ನು ಅಂದರೆ ಕಲೆರಹಿತ ಹೂಕೋಸಿನ ಎಲೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

• ಅವುಗಳ ಮೇಲೆ ಬಿಳಿ ಬಣ್ಣದ ಚುಕ್ಕೆಗಳು ಅಥವಾ ಹಳದಿ ಬಣ್ಣ ಇರಬಾರದು. ಏಕೆಂದರೆ ಇವು ಹಸಿರು ಬಣ್ಣದ ಎಲೆಗಳಿಗೆ ಹೋಲಿಸಿದರೆ ಆರೋಗ್ಯಕರವಲ್ಲ. ತಾಜಾ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಸ್ವಚ್ಛ ಮಾಡಿ ಬಳಸಬೇಕು.

ಹೂಕೋಸಿನ ಎಲೆಗಳನ್ನು ಬಳಸುವುದು ಹೇಗೆ?

• ಹೂಕೋಸಿನ ಎಲೆಗಳಲ್ಲಿ ಒಂದು ರೀತಿಯ ಫ್ಲೇವರ್ ಇರುತ್ತದೆ. ಹಾಗಾಗಿ ಇದನ್ನು ಬಹುತೇಕ ಆಹಾರ ಪದಾರ್ಥಗಳ ತಯಾರಿಯಲ್ಲಿ ಬಳಸಬಹುದಾಗಿದೆ. ಹಸಿಯಾಗಿ ಕೂಡ ಸೇವನೆ ಮಾಡಬಹುದು. ಬೇಯಿಸಿದ ನಂತರದಲ್ಲಿ ಸಹ ಇದರಲ್ಲಿರುವ ಯಾವುದೇ ಪೌಷ್ಟಿಕ ಸತ್ವಗಳು ಹಾಳಾಗುವುದಿಲ್ಲ.

• ನಿಮ್ಮ ಸೂಪ್, ಸಲಾಡ್ ಇತ್ಯಾದಿಗಳಲ್ಲಿ ಇದನ್ನು ಬೆರೆಸಿ ಸೇವನೆ ಮಾಡಬಹುದು. ಮೆಂತ್ಯ ಅಥವಾ ಪಾಲಾಕ್ ಸೊಪ್ಪಿನ ಬದಲಿಗೆ ನೀವು ಬೇಕಾದರೆ ಹೂಕೋಸಿನ ಎಲೆಗಳನ್ನು ಸೇವಿಸಬಹುದು. ಇದರಿಂದ ನಿಮಗೆ ಸಿಗುವ ಕ್ಯಾಲ್ಸಿಯಂ ಮತ್ತು ನಾರಿನ ಅಂಶ ಹೆಚ್ಚಾಗಿ ಸಿಗುತ್ತದೆ. ಹೆಸರುಬೇಳೆ ಜೊತೆ ಸೂಪ್ ಮಾಡಿ ಕೂಡ ಸವಿಯಬಹುದು.

• ಕೆಲವರು ಇದಕ್ಕೆ ಬೆಣ್ಣೆ ಹಾಕಿ ರೋಸ್ಟ್ ಮಾಡಿ ಉಪ್ಪು ಮತ್ತು ಕಾಳುಮೆಣಸಿನ ಪುಡಿ ಸೇರಿಸಿ ಜೊತೆಗೆ ಎಳ್ಳು ಬೆರೆಸಿ ಸೇವನೆ ಮಾಡುತ್ತಾರೆ. ಊಟದ ಜೊತೆಗೆ ಸೈಡ್ ಡಿಶ್ ಆಗಿ ಬಳಸಲು ಇದಕ್ಕೆ ಬೆಳ್ಳುಳ್ಳಿ ಅಥವಾ ಸೋಯಾ ಸಾಸ್ ಹಾಕುತ್ತಾರೆ.