ಮನೆ ಮನರಂಜನೆ ಹೆಡ್’ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನ ಆರೋಪ: ಡಾಲಿ ಧನಂಜಯ ಸ್ಪಷ್ಟನೆ

ಹೆಡ್’ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನ ಆರೋಪ: ಡಾಲಿ ಧನಂಜಯ ಸ್ಪಷ್ಟನೆ

0

ಬೆಂಗಳೂರು(Bengaluru): ಹೆಡ್’ಬುಷ್ ಚಿತ್ರದ ನಟ ಹಾಗೂ ಸಿನಿಮಾದ ನಿರ್ಮಾಪಕರೂ ಆಗಿರುವ ಡಾಲಿ ಧನಂಜಯ್ ವಿರುದ್ಧ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

`ಹೆಡ್’ಬುಷ್’ಸಿನಿಮಾದಲ್ಲಿ ವೀರಗಾಸೆಗೆ ಅಪಮಾನ ಎಸಗುವ ದೃಶ್ಯಗಳಿವೆ ಎಂದು ಕೆಲವರು ಆರೋಪ ಮಾಡಿದ್ದಾರೆ.

ಸಿನಿಮಾದ ಫೈಟ್ ದೃಶ್ಯವೊಂದರಲ್ಲಿ, ವೀರಗಾಸೆ ನೃತ್ಯ ಮಾಡುವ ಕಲಾವಿದರೊಟ್ಟಿಗೆ ನಾಯಕ ಡಾಲಿ ಧನಂಜಯ್ ಫೈಟ್ ಮಾಡಿದ್ದಾರೆ. ಈ ದೃಶ್ಯಗಳ ಬಗ್ಗೆ ಟೀಕೆ ವ್ಯಕ್ತವಾಗಿದೆ.

ಈ ಬಗ್ಗೆ ಸ್ವತಃ ಧನಂಜಯ್ ಸ್ಪಷ್ಟನೆ ನೀಡಿದ್ದಾರೆ, ‘ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೆೊಂಡಿದ್ದೇನೆ ಎಂದು ತಿಳಿಸಿದ್ದಾರೆ.