ಮನೆ ಕ್ರೀಡೆ ಪರ್ತ್‌ನಲ್ಲಿ ಭಾನುವಾರ ನೆದರ್ಲೆಂಡ್ಸ್‌ ವಿರುದ್ಧ ಪಾಕಿಸ್ತಾನ ಪೈಪೋಟಿ

ಪರ್ತ್‌ನಲ್ಲಿ ಭಾನುವಾರ ನೆದರ್ಲೆಂಡ್ಸ್‌ ವಿರುದ್ಧ ಪಾಕಿಸ್ತಾನ ಪೈಪೋಟಿ

0

ಪರ್ತ್‌ (ಎಎಫ್‌ಪಿ): ಪಾಕಿಸ್ತಾನ ತಂಡ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾನುವಾರ ನೆದರ್ಲೆಂಡ್ಸ್‌ ತಂಡದ ಸವಾಲು ಎದುರಿಸಲಿದೆ.

ಆಡಿದ ಎರಡೂ ಪಂದ್ಯಗಳಲ್ಲಿ ಸೋತಿರುವ ಬಾಬರ್‌ ಅಜಂ ಬಳಗ, ಸೆಮಿಫೈನಲ್‌ ಪ್ರವೇಶವನ್ನು ಜೀವಂತವಾಗರಿಸಿಕೊಳ್ಳಬೇಕಾದರೆ ಭಾನುವಾರ ಭಾರಿ ಅಂತರದಿಂದ ಗೆಲುವು ಪಡೆಯುವುದು ಅನಿವಾರ್ಯವಾಗಿದೆ.

ನೆದರ್ಲೆಂಡ್ಸ್‌ ಕೂಡಾ ತನ್ನ ಎರಡೂ ಪಂದ್ಯಗಳನ್ನು ಸೋತಿದೆ. ಉಭಯ ತಂಡಗಳು ‘ಗುಂಪು 2’ ರಲ್ಲಿ ಕೊನೆಯ ಎರಡು ಸ್ಥಾನಗಳಲ್ಲಿವೆ. ಜಿಂಬಾಬ್ವೆ ಕೈಯಲ್ಲಿ ಪಾಕ್‌ ಒಂದು ರನ್‌ನಿಂದ ಸೋತಿತ್ತು. ಆ ನಿರಾಸೆಯಿಂದ ಹೊರಬರುವ ಪ್ರಯತ್ನದಲ್ಲಿ ಆಟಗಾರರು ಇದ್ದಾರೆ.