ಮನೆ ದೇವರನಾಮ ಪೊಂದಿ ಬದುಕಿರೊ ರಾಘವೇಂದ್ರ ರಾಯರ      

ಪೊಂದಿ ಬದುಕಿರೊ ರಾಘವೇಂದ್ರ ರಾಯರ      

0

ಪೊಂದಿ ಬದುಕಿರೊ ರಾಘವೇಂದ್ರ ರಾಯರ        || ಪ ||

ಕುಂದದೆಮ್ಮನು ಕರುಣದಿಂದ ಪೊರೆವರ        || ಅ ||

ನಂಬಿ ಸ್ತುತಿಸುವ ಜನಕದಂಬಕಿಷ್ಟವ

ತುಂಬಿ ಕೊಡುವನು ಅನ್ಯರ್ಹ೦ಬಲೀಯನು    || ೧ ||

ಅಲವಬೋಧರ ಸುಮತ ಜಲಧಿಚ೦ದಿರ

ಒಲಿದು ಭಕ್ತರ ಕಾಯ್ವ ಸುಲಭಸುಂದರ        || ೨ ||

ಗುರುಸುಧಿಂದ್ರದರ ವಿಮಲ ಕರಜನೆನಿಪರ

ಸ್ಮರಿಸಿ ಸುರುಚಿರ ವಿಮಲಚರಣಪುಷ್ಕರ    || ೩ ||

ಫಾಲಲೋಚನ ವಿನುತ ಮೂಲರಾಮನ

ಲೀಲೆಯನುದಿನ ತುತಿಪ ಶೀಲ ಸದ್ಗುಣ        || ೪ ||

ಭೂತಭಾವನ ಜಗನ್ನಾಥ ವಿಠ್ಠಲನ

ಪ್ರೀತಿಪಾತ್ರನ ನಂಬಿರೀತನನುದಿನ        || ೫ |