ಮನೆ ಹಾಸ್ಯ ಜೋಕು ಜೋಕಾಲಿ

ಜೋಕು ಜೋಕಾಲಿ

0

ಡಾಕ್ಟರ್: ಬನ್ನಿ ಉಮೇಶ್.. ಏನ್ ಸಮಾಚಾರ?

ಉಮೇಶ್: ಸ್ವಲ್ಪ ಹುಷಾರಿಲ್ಲಾ ಡಾಕ್ಟ್ರೇ… ಯಾಕೋ ತಲೆ ಭಾರ..

ಡಾಕ್ಟರ್: ಡ್ರಿಂಕ್ಸ್ ಮಾಡ್ತೀರಾ?

ಉಮೇಶ್: ಹೂಂ… ಆದ್ರೆ ಗ್ಲಾಸ್ ತಂದಿಲ್ಲಾ ಡಾಕ್ಟ್ರೇ.. ನಿಮ್ ಗ್ಲಾಸ್ ನಲ್ಲೇ ಸ್ವಲ್ಪ ಹಾಕ್ಕೊಡಿ…

 ***

love ಫೇಲ್ ಆದವರು ಈ ಕಾಲದಲ್ಲಿ ಏನ್ಮಾಡ್ತಾರೆ?

ಹುಡುಗರು ಅವರ ಗಡ್ಡ ಮೀಸೆ ತೆಗೆದರೆ ಹತ್ತು ವರ್ಷದ್ ಹಿಂದಕ್ಕೆ ಹೋಗ್ತಾರೆ

ಹುಡುಗಿರು ಅವರ ಮೇಕಪ್ ತೆಗೆದ್ರೆ ಹದಿನೈದ್ ವರ್ಷ ಮುಂದಕ್ಕೆ ಹೋಗ್ತಾರೆ

 ***

ಅಂಗಡಿಯವ: “ಏನ್ ಬೇಕ್ ಸಾರ್?”

ನಾನು: “ನಂಗೆ ಆತ್ಮವಿಶ್ವಾಸ ಬೇಕು. ಜಗತ್ತನ್ನೇ ಎದುರಿಸೋ ಧೈರ್ಯ ಬೇಕು. ಬದುಕೆಂಬ ಗೂಳಿಯ ಕೋಡು ಹಿಡಿದು ಬಗ್ಗಿಸಿ ಗೆಲ್ಲೋ ಛಲ, ತಾಕತ್ತು ಬೇಕು. ಇಡೀ ಬ್ರಹ್ಮಾಂಡವೇ ನನ್ನದು ಅಂತಾ ಎದ್ದು ನಿಲ್ಲೋ ಶಕ್ತಿ ಬೇಕು”

ಅಂಗಡಿಯವ: “ಲೋ ರಾಜು, ಇವರಿಗೆ ಒಂದ್ ಕ್ವಾರ್ಟ್ರು ಓಲ್ಡ್ ಮಾಂಕು, ಒಂದ್ ಕಡ್ಲೆ ಬೀಜದ್ ಪ್ಯಾಕೆಟ್ ಕೊಡಮ್ಮಾ!”