ಕನ್ನಡ ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡ ಪ್ರತಿಭಾನ್ವಿತ ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಝೀ ಕನ್ನಡದ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಇವರು ನಾಯಕರಾಗಿ ನಟಿಸಿದ್ದರು. ಕಳೆದ ವರ್ಷ ಇದೇ ಸಮಯದಲ್ಲಿ ಧಾರಾವಾಹಿಯ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದು ದಿಲೀಪ್ ರಾಜ್ ಮೇ 13ರಂದು ಮುಂಜಾನೆ ತೀವ್ರ ಹೃದಯಾಘಾತದಿಂದ ಬಳಲಿದ್ದು, ಶೀಘ್ರವೇ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾದಗ ಸಾವನ್ನಪ್ಪಿದ್ದಾರೆ. ದಿಲೀಪ್ ರಾಜ್ ಅವರ ಅಕಾಲಿಕ ಮರಣ ಕನ್ನಡ ಕಿರುತೆರೆ ಮತ್ತು ಹಿರಿತೆರೆಯ ಕಲಾವಿದರಿಗೆ ಭರಸಿಡಿನಂತೆ ಎರಗಿದೆ ಎನ್ನಲಾಗುತ್ತಿದೆ.
ಆದರೆ ಹಿಟ್ಲರ್ ಕಲ್ಯಾಣ ಧಾರಾವಾಹಿಯ ಇಬ್ಬರು ನಟರು ಕೂಡ ಒಂದು ವರ್ಷದ ಅಂತರದಲ್ಲಿ ಒಂದೇ ದಿನ ಹೃದಯಾಘಾತಕ್ಕೆ ಬಲಿಯಾಗಿರುವುದು ಕಾಕತಾಳೀಯವಾಗಿದೆ. ಕಳೆದ ವರ್ಷ ಮೇ 12ರಂದು ಹಿಟ್ಲರ್ ಕಲ್ಯಾಣದಲ್ಲಿ ವಿಶ್ವರೂಪಂ ಪಾತ್ರದಲ್ಲಿ ನಟಿಸಿದ್ದ ರಾಕೇಶ್ ಪೂಜಾರಿ ನಿಧನರಾಗಿದ್ದರು. ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯತೆ ಪಡೆದಿದ್ದ ನಗುಮುಖದ ಒಡೆಯ ರಾಕೇಶ್ ಪೂಜಾರಿ ಕಳೆದ ವರ್ಷ ಗೆಳೆಯನ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ಡ್ಯಾನ್ಸ್ ಕೂಡ ಮಾಡಿದ್ದರು. ಆ ವೇಳೆ ಹಠಾತ್ ಕುಸಿದುಬಿದ್ದಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಉಳಿಸಿಕೊಳ್ಳಲಾಗದೆ ಹೃದಯಾಘಾತಕ್ಕೆ ನಟ ಬಲಿಯಾಗಿದ್ದರು. ಹಾಗೆ ದಿಲೀಪ್ ರಾಜ್ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಾಯಕನಾಗಿ ಗಮನ ಸೆಳೆದರೆ, ರಾಕೇಶ್ ಪೂಜಾರಿ ತಮಾಷೆ ಮಾಡುತ್ತಾ, ಎಲ್ಲರನ್ನೂ ನಗಿಸುತ್ತಾ, ನಾಯಕಿಗೆ ಸದಾ ನೆರವು ನೀಡುವ ಪಾತ್ರ ಇವರದ್ದಾಗಿತ್ತು. ಇವರ ಪಾತ್ರವನ್ನು, ಕಾಮಿಡೀ ಟೈಮಿಂಗ್ ನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಇದೀಗ ಇಬ್ಬರು ಒಂದು ವರ್ಷದಲ್ಲಿ ಒಂದೇ ದಿನದ ಅಂತರದಲ್ಲಿ ಸಾವನ್ನಪ್ಪಿರುವುದು ಬೇಸರ ತಂದಿದೆ ಎನ್ನಲಾಗಿದೆ.

















