ಮನೆ ಸುದ್ದಿ ಜಾಲ ಟೆಸ್ಟ್​  ಕ್ರಿಕೆಟ್ ನಿವೃತ್ತಿಗೆ ಒಂದು ವರ್ಷ : ವಿರಾಟ್ ಕೊಹ್ಲಿ

ಟೆಸ್ಟ್​  ಕ್ರಿಕೆಟ್ ನಿವೃತ್ತಿಗೆ ಒಂದು ವರ್ಷ : ವಿರಾಟ್ ಕೊಹ್ಲಿ

0

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿ ಇಂದಿಗೆ (ಮೇ 12) ಸರಿಯಾಗಿ ಒಂದು ವರ್ಷ ಕಳೆದಿದೆ. ಆಧುನಿಕ ಕ್ರಿಕೆಟ್‌ನ ‘ರನ್ ಮಷೀನ್’ ಎಂದೇ ಖ್ಯಾತರಾಗಿದ್ದ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತಕ್ಕೆ ಹೊಸ ಆಕ್ರಮಣಕಾರಿ ಗುಣವನ್ನು ತಂದುಕೊಟ್ಟವರು. ಈ ದಿನವನ್ನು ಎಲ್ಲರೂ ನೆನಪಿಸಿಕೊಳ್ಳಿತ್ತಿದ್ದಾರೆ. ವಿರಾಟ್ ಕೊಹ್ಲಿ ಕೇವಲ ಒಬ್ಬ ಬ್ಯಾಟರ್ ಆಗಿ ಮಾತ್ರವಲ್ಲದೆ, ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕನಾಗಿಯೂ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ.

ಹಾಗೆ ಒಟ್ಟು 123 ಪಂದ್ಯಗಳನ್ನು ಆಡಿರೋ ಅವರು, 9,230 ರನ್​ ಬಾರಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 49.15 ಇದೆ. ಇದರಲ್ಲಿ, 30 ಶತಕ ಹಾಗೂ, 31 ಅರ್ಧಶತಕ ಇದೆ. ದಕ್ಷಿಣ ಆಫ್ರಿಕಾ ವಿರುದ್ಧ 254 ರನ್ ಬಾರಿಸಿದ್ದರು. ಇದು ಟೆಸ್ಟ್ ಅಲ್ಲಿ ಅವರು ಬಾರಿಸಿದ ಗರಿಷ್ಠ ರನ್. ಕೊಹ್ಲಿ ಭಾರತ ತಂಡವನ್ನು 68 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ್ದು, ಅದರಲ್ಲಿ 40 ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಇದು ಭಾರತೀಯ ಟೆಸ್ಟ್ ಇತಿಹಾಸದಲ್ಲೇ ಒಬ್ಬ ನಾಯಕನ ಶ್ರೇಷ್ಠ ಸಾಧನೆ. ಆಸ್ಟ್ರೇಲಿಯಾ ಮಣ್ಣಿನಲ್ಲಿ ಟೆಸ್ಟ್ ಸರಣಿ (2018-19) ಗೆದ್ದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆ ಇವರದ್ದು. ಇವರ ಅವಧಿಯಲ್ಲಿ ಭಾರತ ತಂಡ ವಿದೇಶಗಳಲ್ಲಿ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿತ್ತು.

ಭಾರತದ ಪರ ಅತಿ ಹೆಚ್ಚು ಟೆಸ್ಟ್ ದ್ವಿಶತಕಗಳನ್ನು ಬಾರಿಸಿದ ದಾಖಲೆ ಕೊಹ್ಲಿ ಹೆಸರಲ್ಲಿದೆ. ಸುಮಾರು 42 ತಿಂಗಳುಗಳ ಕಾಲ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರತ ತಂಡವನ್ನು ನಂಬರ್ 1 ಸ್ಥಾನದಲ್ಲಿರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಫಿಟ್‌ನೆಸ್ ಮತ್ತು ಆಕ್ರಮಣಕಾರಿ ಗುಣಕ್ಕೆ ಹೊಸ ಭಾಷ್ಯ ಬರೆದ ಕೊಹ್ಲಿ, ಐಪಿಎಲ್ ಹಾಗೂ ಏಕದಿನದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಟಿ20 ಫಾರ್ಮ್ಯಾಟ್ ಮಾತ್ರ ನೋಡುತ್ತೇನೆ ಎನ್ನುವವರಿಗೆ ಟೆಸ್ಟ್ ಕ್ರಿಕೆಟ್ ಬಗ್ಗೆಯೂ ಆಸಕ್ತಿ ಮೂಡುವಂತೆ ಮಾಡಿದ ಖ್ಯಾತಿ ಕೊಹ್ಲಿಗೆ ಇದೆ. ಅವರ ಅನುಪಸ್ಥಿತಿ ಟೆಸ್ಟ್ ಕ್ರಿಕೆಟ್ ಪ್ರಿಯರಲ್ಲಿ ಇಂದಿಗೂ ಒಂದು ರೀತಿಯ ಶೂನ್ಯತೆಯನ್ನು ಮೂಡಿಸಿರುವುದು ಸುಳ್ಳಲ್ಲ.

ಆದರೆ ಈಗ ಟೀಂ ಇಂಡಿಯಾ ಟೆಸ್ಟ್​​​ನಲ್ಲಿ ಹೀನಾಯವಾಗಿ ಸೋಲುತ್ತಿದ್ದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಟೆಸ್ಟ್​​ಗೆ ಮರಳುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಅವರು ನಾಯತಕ್ವಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಅವರು ಅತಿಯಾಗಿ ಪ್ರೀತಿಸುವ ಫಾರ್ಮ್ಯಾಟ್ ಎಂದರೆ ಟೆಸ್ಟ್. ಆದರೆ, ಕೊಹ್ಲಿಗೆ ಟೆಸ್ಟ್​ಗೆ ಕಂಬ್ಯಾಕ್ ಮಾಡೋದು ಸದ್ಯ ವಾಸ್ತವಕ್ಕೆ ದೂರವಾದ ಮಾತು ಎಂದು ತಿಳಿದುಬಂದಿದೆ.