ಮನೆ ಅಪರಾಧ ಕಲಬುರ್ಗಿ: ನಿಂತ ಲಾರಿಗೆ ಬೈಕ್ ಡಿಕ್ಕಿ- ಮೂವರ ಸಾವು

ಕಲಬುರ್ಗಿ: ನಿಂತ ಲಾರಿಗೆ ಬೈಕ್ ಡಿಕ್ಕಿ- ಮೂವರ ಸಾವು

0

ಕಲಬುರ್ಗಿ: ನಿಂತ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಪರಿಣಾಮ ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಕಮಲಾಪುರದ ನಾವದಗಿ ಸಮೀಪದ ದೇಶಿ ಕೇಂದ್ರ ಶಾಲೆ ಬಳಿ ನಡೆದಿದೆ.

ಗೋಗಿ ತಾಂಡಾದ ನಿವಾಸಿ ದೀಪಕ ಗೋವಿಂದ ರಾಠೋಡ್ (45), ಅವರ ಸಹೋದರನ ಪುತ್ರ, ಕಲಬುರಗಿಯ ದಾಮೋದರ ರಘೋಜಿ ಕಾಲೇಜಿನ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿ ಯುವರಾಜ್ ರಾಮಶೆಟ್ಟಿ ರಾಠೋಡ್ (17), ಸೋದರಳಿಯ ಕಮಲಾಪುರ ಎಚ್ ಕೆಇ ಐಟಿಐ ಪ್ರಥಮ ವರ್ಷದ ವಿದ್ಯಾರ್ಥಿ ರಾಹುಲ ಖೇಮು ಚೌವಾಣ್ (17) ಮೃತರು.

ಕುಟುಂಬದವರೆಲ್ಲ ಸೇರಿ ದೇವರ ಹರಕೆ ತೀರಿಸಲು ಸಾವಳಗಿ ತಾಂಡಾಕ್ಕೆ ಕ್ರೂಸರ್ ವಾಹನದಲ್ಲಿ ಮತ್ತು ಈ ಮೂವರು ಬೈಕ್ ಮೆಲೆ ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾತಂರಿಸಲಾಗಿದೆ.