ಮನೆ ದೇವರನಾಮ ಗಜವದನ ಬೇಡುವೆ ಗೌರಿ ತನಯ

ಗಜವದನ ಬೇಡುವೆ ಗೌರಿ ತನಯ

0

ಗಜವದನ ಬೇಡುವೆ ಗೌರಿ ತನಯ
ತ್ರಿಜಗ ವಂದಿತನೇ ಸುಜನರ ಪೊರೆವನೇ

ಪಾಶಾಂಕುಶಧರ ಪರಮ ಪವಿತ್ರ
ಮೂಷಿಕವಾಹನ ಮುನಿಜನಪ್ರೇಮಾ

ಮೋದದಿ ನಿನ್ನಯ ಪಾದವ ತೋರೋ
ಸಾಧು ವಂದಿತನೆ ಆದರದಿಂದಲಿ

ಸರಸಿಜನಾಭ ಶ್ರಿ ಪುರಂದರ ವಿಠಲನ
ನಿರುತ ನೆನೆಯುವಂತೆ ದಯ ಮಾಡೋ

-ಪುರಂದರದಾಸರು