ಮನೆ ಅಪರಾಧ ಬೆಂಗಳೂರು: ಕುಖ್ಯಾತ ರೌಡಿಗಳ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ

ಬೆಂಗಳೂರು: ಕುಖ್ಯಾತ ರೌಡಿಗಳ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ

0

ಬೆಂಗಳೂರು(Bengaluru): ಇಂದು ಬೆಳ್ಳಂಬೆಳಿಗ್ಗೆ ನಗರದ ಕುಖ್ಯಾತ ರೌಡಿಗಳ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, 25  ಮಂದಿ ರೌಡಿಗಳನ್ನು ವಶಕ್ಕೆ ಪಡೆದಿದ್ದಾರೆ.

ಅಪರಾಧ ಚಟುವಟಿಕೆ ನಡೆಸುತ್ತಿದ್ದ ಗಂಭೀರ ಆರೋಪದಡಿ  ಐವರು ಎಸಿಪಿ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದ್ದು, 86 ಕ್ಕೂ ಹೆಚ್ಚು ಮನೆಗಳನ್ನು ಶೋಧಿಸಿದ್ದಾರೆ.

ಸೈಕಲ್ ರವಿ, ವಿಲ್ಸನ್ ಗಾರ್ಡನ್ ನಾಗ, ಸೈಲೆಂಟ್ ಸುನೀಲ್, ಬೇಕರಿ ರಘು ಹಾಗು ಒಂಟೆ ರೋಹಿತ್ ಎಂಬಾತ ಸೇರಿದಂತೆ ಹಲವು ರೌಡಿಗಳ ಮನೆಗಳ ಮೇಲೆ ದಾಳಿ ನಡೆದಿದೆ. ಕೆಲ ರೌಡಿಗಳು ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.

ಕೋತಿರಾಮ, ಟಾಮಿ, ವಿಜಯನಗರದ ರೌಡಿಶೀಟರ್ ರಾಘವೇಂದ್ರ ಪ್ರಸಾದ್ ಸೇರಿ ಹಲವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.‌ ರಾಘವೇಂದ್ರ ಎಂಬಾತನ ಮನೆಯಲ್ಲಿ ಎರಡು ಲಾಂಗ್ ಪತ್ತೆಯಾಗಿದ್ದು, ಜಪ್ತಿ ಮಾಡಲಾಗಿದೆ.