ಮನೆ ರಾಜ್ಯ ಶಿವಮೊಗ್ಗ: ಶರಾವತಿ ನೀರಿಗೆ ಇಳಿದ ಬಸ್, ತಪ್ಪಿದ ಭಾರಿ ದುರಂತ

ಶಿವಮೊಗ್ಗ: ಶರಾವತಿ ನೀರಿಗೆ ಇಳಿದ ಬಸ್, ತಪ್ಪಿದ ಭಾರಿ ದುರಂತ

0

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಬಸ್ ಶರಾವತಿ ನೀರಿಗೆ ಇಳಿದಿದ್ದು, ಅದೃಷ್ಟವಶಾತ್ ಭಾರಿ ದುರಂತ ತಪ್ಪಿದಂತಾಗಿದೆ.

ಸಾಗರ ತಾಲೂಕು ಹೊಳೆ ಬಾಗಿಲಿನ ಹಿನ್ನೀರಿನಲ್ಲಿ ಸಿಗಂದೂರು ಕಡೆ ಹೊರಟಿದ್ದ ಬಸ್ ಲಾಂಚ್’ಗಾಗಿ ಕಾಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹಿನ್ನೀರಿಗೆ ಇಳಿದಿದೆ. ಬಸ್ ಹಿನ್ನೀರಿಗೆ ಇಳಿಯುತ್ತಿದ್ದಂತೆ ಬಸ್ ನಿಂದ ಹೊರಬಂದು ಪ್ರಯಾಣಿಕರು ಜೀವ ಉಳಿಸಿಕೊಂಡಿದ್ದಾರೆ.

ಬಳಿಕ ಸಿಗಂದೂರು ಸೇತುವೆ ನಿರ್ಮಾಣದ ಹಿಟಾಚಿ ಬಳಸಿ ಬಸ್ ಮೇಲಕ್ಕೆತ್ತಲಾಗಿದೆ. ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ.