ಮನೆ ಸುದ್ದಿ ಜಾಲ ಹಾಸನ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿದ ಕಾಡಾನೆ- ಆತಂಕ

ಹಾಸನ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿದ ಕಾಡಾನೆ- ಆತಂಕ

0

ಹಾಸನ(Hassan: ರಾಷ್ಟ್ರೀಯ ಹೆದ್ದಾರಿ 75 ರ ನಿಡನೂರು ಸಮೀಪ ಒಂಟಿ ಸಲಗವೊಂದು ರಸ್ತೆ ದಾಟಿದ್ದು, ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗುರುವಾರ ಬೆಳಿಗ್ಗೆ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಸುತ್ತ ಸಂಚಾರ ನಡೆಸಿದ ಕಾಡಾನೆ, ಕೊನೆಗೆ ಹೆದ್ದಾರಿ ದಾಟಿ ಚಿಕ್ಕನಾಯಕನಹಳ್ಳಿ ಗ್ರಾಮದ ಕಡೆ ತೆರಳಿತು.

ಕೆಲ ದಿನದ ಹಿಂದೆಯಷ್ಟೇ ಸಕಲೇಶಪುರ– ಹಾಸನ ಮಾರ್ಗದ ಕುಂಬಾರಘಟ್ಟಿ ಸಮೀಪ ಕಾಡಾನೆಯೊಂದಿಗೆ ಹೆದ್ದಾರಿ ದಾಟಿತ್ತು. ಗುರುವಾರ ಮತ್ತೊಮ್ಮೆ ಹೆದ್ದಾರಿಯಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು, ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ.