ಮನೆ ಅಂತಾರಾಷ್ಟ್ರೀಯ ಪಾಕಿಸ್ತಾನದ ವಾಯವ್ಯ ಭಾಗದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ: ಮೂವರ ಸಾವು

ಪಾಕಿಸ್ತಾನದ ವಾಯವ್ಯ ಭಾಗದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ: ಮೂವರ ಸಾವು

0

ಪೇಶಾವರ(Peshawar): ಪಾಕಿಸ್ತಾನದ ವಾಯವ್ಯ ಭಾಗ ಖೈಬರ್ ಫಂಕ್ತುವ್ವಾ ಪ್ರಾಂತ್ಯದಲ್ಲಿ ಗುರುವಾರ ಉಗ್ರನ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು,  ಒಬ್ಬ ಯೋಧ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ.

ಅಫ್ಗಾನಿಸ್ತಾನ್ ಗಡಿಯಲ್ಲಿರುವ ಉತ್ತರ ವಾಜಿರಿಸ್ತಾನ್‌’ದ ಮಿರಾನ್‌’ಶಾ ಪಟ್ಟಣದ ಸೇನಾ ಕಚೇರಿ ಬಳಿ ಈ ಘಟನೆ ನಡೆದಿದೆ.

ಘಟನೆಯಲ್ಲಿ ಯೋಧ ಸೇರಿದಂತೆ ಒಬ್ಬ ನಾಗರಿಕ ಮೃತಪಟ್ಟಿದ್ದು, 9 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಸೇನಾ ವಕ್ತಾರರು ತಿಳಿಸಿದ್ದಾರೆ.

ಇದುವರೆಗೆ ಯಾವುದೇ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.

ಘಟನೆಯನ್ನು ಪಾಕ್ ಪ್ರಧಾನಿ ಶಹಬಾಜ್ ಶರೀಫ್ ಅವರು ತೀವ್ರವಾಗಿ ಖಂಡಿಸಿದ್ದು, ಮುಸ್ಲಿಂ ಮೇಲೆ ದಾಳಿ ಮಾಡುವ ಮತ್ತೊಬ್ಬ ಮುಸ್ಲಿಂ ಖಂಡಿತವಾಗಿಯೂ ಮುಸ್ಲಿಂ ಆಗಿರುವುದಿಲ್ಲ ಎಂದು ಪರೋಕ್ಷವಾಗಿ ತಾಲಿಬಾನ್ ವಿರುದ್ಧ ಕಿಡಿಕಾರಿದ್ದಾರೆ.