ಜೋರ್ಗಟ್: ಅಸ್ಸಾಂನ ಜೋರ್ಗಟ್ ವಾಯುಪಡೆ ನಿಲ್ದಾಣದಲ್ಲಿ ಭಾರತೀಯ ವಾಯುಪಡೆಯ AN-32 ವಿಮಾನ ಅಪಘಾತಕ್ಕೀಡಾಗಿದೆ ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ. ಐಎಎಫ್ ವಿಮಾನವು ವಾಯುಪಡೆ ನಿಲ್ದಾಣದಲ್ಲಿ ಇಂದು ಲ್ಯಾಂಡಿಂಗ್ ಸಮಯದಲ್ಲಿ ಅಪಘಾತಕ್ಕೀಡಾಗಿದೆ ಎನ್ನಲಾಗುತ್ತಿದೆ.

ಹಾಗೂ ಈ ವಿಮಾನವನ್ನು ಸಾಮಗ್ರಿ ಸರಬರಾಜುಗಾಗಿ ಬಳಸಲಾಗುತ್ತಿತ್ತು. ಅಪಘಾತದಲ್ಲಿ ಪೈಲಟ್ ಪ್ರಾಣ ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. “ಸ್ಥಳದಲ್ಲಿ ರಕ್ಷಣಾ ಮತ್ತು ತನಿಖಾ ಪ್ರಯತ್ನಗಳು ಸಾಗಿವೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ” ಎಂದು IAF ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಘಟನೆ ಸಂಭವಿಸಿದಾಗ AN-32 ವಿಮಾನವು ರೌರಿಯಾ ಪ್ರದೇಶದಲ್ಲಿರುವ IAF ನ ವಾಯುನೆಲೆಯಲ್ಲಿ ಲ್ಯಾಂಡಿಂಗ್ ಆಗುತ್ತಿತ್ತು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. “ಹಿರಿಯ ಐಎಎಫ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಸಾವುನೋವುಗಳ ಬಗ್ಗೆ ಇನ್ನೂ ಮಾಹಿತಿ ಲಭ್ಯವಿಲ್ಲ” ಎಂದು ಮಾಹಿತಿ ತಿಳಿದುಬಂದಿದೆ.
















