ಮನೆ ರಾಷ್ಟ್ರೀಯ ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ

ಮುಂಬೈನ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ

0

ಮುಂಬೈ(Mumbai): ವಾಣಿಜ್ಯ ನಗರಿ ಮುಂಬೈಯ  ಕರ್ರೆ ರೋಡ್ ಪ್ರದೇಶದಲ್ಲಿರುವ ಕಟ್ಟಡದ 14ನೇ ಮಹಡಿಯ ಫ್ಲಾಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಇದುವರೆಗೆ ಯಾವುದೇ ಸಾವು-ನೋವು ಬಗ್ಗೆ ವರದಿಯಾಗಿಲ್ಲ.

ಗುರುವಾರ ಬೆಳಿಗ್ಗೆ ಸುಮಾರು 11ರ ಹೊತ್ತಿಗೆ ಒನ್ ಅವಿಘ್ನ ಪಾರ್ಕ್ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 2021ರ ಅಕ್ಟೋಬರ್‌’ನಲ್ಲಿ ಇದೇ ವಸತಿ ಸಂಕೀರ್ಣದ 19ನೇ ಮಹಡಿಯಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಇತರರನ್ನು ರಕ್ಷಿಸುತ್ತಿದ್ದಾಗ ಸೆಕ್ಯೂರಿಟಿ ಗಾರ್ಡ್ ಸಾವಿಗೀಡಾಗಿದ್ದರು.