ಮನೆ ದೇವರ ನಾಮ ಹನುಮ ನಮ್ಮ ತಾಯಿತಂದೆ

ಹನುಮ ನಮ್ಮ ತಾಯಿತಂದೆ

0

ಹನುಮ ನಮ್ಮ ತಾಯಿತಂದೆ

ಭೀಮ ನಮ್ಮ ಬಂಧು ಬಳಗ

ಆನಂದ ತೀರ್ಥರೇ ನಮ್ಮ ಗತಿಗೋತ್ರವಯ್ಯ ||ಪ||

ತಾಯಿ ತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ |

ಆಯಾಸವಿಲ್ಲದೆ ಸಂಜೀವನವ ತಂದೆ |

ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆವ ರಘು |

ರಾಯನಂಘ್ರಿಗಳೆ ಸಾಕ್ಷಿ ತ್ರೇತಾ ಯುಗದಿ ||

ಬಂಧುಬಳಗದಂತೆ ಆಪದ್ಬಾಂಧವನಾಗಿ ಪಾರ್ಥನಿಗೆ

ಬಂದ ದುರಿತಗಳ ಪರಿಹರಿಸಿ |

ಅಂಧಕ ಜಾತರ ಕೊಂದು ನಂದ ಕಂದಾರ್ಪಣೆಂದ ಗೋವಿಂದನಂಘ್ರಿಗಳೆ ಸಾಕ್ಶಿ ದ್ವಾಪರ ಯುಗದಿ ||

ಗತಿ ಗೋತ್ರರಂತೆ ಸಾಧುಯತಿಗಳಿಗೆ ಮತಿಯ ತೋರಿ |

ಮತಿ ಕೆಟ್ಟ ಇಪ್ಪತ್ತಒಂದು ಮತವ ಖಂಡಿಸಿ |

ಗತಿಗೆಟ್ಟ ವೈಷ್ಣವರಿಗೆ ಗತಿಯ ತೋರಿದೆ ಪರಮಾತ್ಮ

ಗತಿ ಪುರಂದರ ವಿಠಲನೆ ಸಾಕ್ಷಿ ಕಲಿಯುಗದಲ್ಲಿ ||

ರಚನೆ : ಪುರಂದರದಾಸರು