Saval TV on YouTube
ಶ್ರೀನಗರ: ಹಲವು ಉಗ್ರಗಾಮಿ ಸಂಘಟನೆಗಳ ಭಯೋತ್ಪಾದನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಲವು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್’ಐಎ) ಶನಿವಾರ ದಾಳಿ ನಡೆಸಿದೆ.
ದಾಳಿ ವೇಳೆ ನಡೆಯಬಹುದಾದ ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ಅರೆಸೈನಿಕ ಪಡೆಗಳು ಎನ್’ಐಎಗೆ ನೆರವು, ಭದ್ರತೆ ಒದಗಿಸಿವೆ.
‘ಉಗ್ರ ಸಂಘಟನೆಗಳ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವ ಜನರು ಇಲ್ಲಿದ್ದಾರೆ. ನಮ್ಮ ಕಾರ್ಯಾಚರಣೆ ಅವರ ವಿರುದ್ಧ ನಡೆಯುತ್ತಿದೆ’ ಎಂದು ಎನ್’ಐಎ ಮೂಲಗಳು ತಿಳಿಸಿವೆ.
ಈ ವರೆಗಿನ ದಾಳಿಯಲ್ಲಿ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.