ಮನೆ ರಾಷ್ಟ್ರೀಯ ಭಯೋತ್ಪಾದನಾ ಪ್ರಕರಣ: ಜಮ್ಮು ಕಾಶ್ಮೀರದ ಹಲವು ಸ್ಥಳಗಳಲ್ಲಿ ಎನ್’ಐಎ ದಾಳಿ

ಭಯೋತ್ಪಾದನಾ ಪ್ರಕರಣ: ಜಮ್ಮು ಕಾಶ್ಮೀರದ ಹಲವು ಸ್ಥಳಗಳಲ್ಲಿ ಎನ್’ಐಎ ದಾಳಿ

0

ಶ್ರೀನಗರ: ಹಲವು ಉಗ್ರಗಾಮಿ ಸಂಘಟನೆಗಳ ಭಯೋತ್ಪಾದನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಲವು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌’ಐಎ) ಶನಿವಾರ ದಾಳಿ ನಡೆಸಿದೆ.

ದಾಳಿ ವೇಳೆ ನಡೆಯಬಹುದಾದ ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ಅರೆಸೈನಿಕ ಪಡೆಗಳು ಎನ್’ಐಎಗೆ ನೆರವು, ಭದ್ರತೆ ಒದಗಿಸಿವೆ.

‘ಉಗ್ರ ಸಂಘಟನೆಗಳ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವ ಜನರು ಇಲ್ಲಿದ್ದಾರೆ. ನಮ್ಮ ಕಾರ್ಯಾಚರಣೆ ಅವರ ವಿರುದ್ಧ ನಡೆಯುತ್ತಿದೆ’ ಎಂದು ಎನ್‌’ಐಎ ಮೂಲಗಳು ತಿಳಿಸಿವೆ.

ಈ ವರೆಗಿನ ದಾಳಿಯಲ್ಲಿ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಿಂದಿನ ಲೇಖನಫಾಸ್ಟ್’ಟ್ಯಾಗ್ ಇಲ್ಲದ ವಾಹನಗಳಿಗೆ ಡಬಲ್ ಟೋಲ್ ತೆರಿಗೆ: ಕೇಂದ್ರದ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್
ಮುಂದಿನ ಲೇಖನಕೋವಿಡ್ ಬಗ್ಗೆ ಆತಂಕ  ಬೇಡ: ಮುನ್ನೆಚ್ಚರಿಕೆ ಕ್ರಮ ಅನುಸರಿಸಿ- ಸಿಎಂ ಬೊಮ್ಮಾಯಿ