ಮನೆ ಅಪರಾಧ ಮನೆಯ ಕಾರು ಚಾಲಕನಿಂದಲೇ ವೈದ್ಯೆ ಮೇಲೆ ಲೈಂಗಿಕ ದೌರ್ಜನ್ಯ: ದೂರು ದಾಖಲು

ಮನೆಯ ಕಾರು ಚಾಲಕನಿಂದಲೇ ವೈದ್ಯೆ ಮೇಲೆ ಲೈಂಗಿಕ ದೌರ್ಜನ್ಯ: ದೂರು ದಾಖಲು

0

ಬೆಂಗಳೂರು(Bengaluru: ಮನೆಯ ಕಾರು ಚಾಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ವೈದ್ಯೆಯೊಬ್ಬರು ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

32 ವರ್ಷದ ಸಂತ್ರಸ್ತೆ ಮಹಿಳೆ ಡಿಸೆಂಬರ್ 15ರಂದು ತಮ್ಮ ನಾಲ್ಕೂವರೆ ವರ್ಷದ ಮಗನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ತಲೆ ಸುತ್ತು ಬಂದು ಅಸ್ವಸ್ಥರಾಗಿದ್ದಾರೆ.

ಈ ಸಮಯವನ್ನು ದುರ್ಬಳಕೆ ಮಾಡಿಕೊಂಡ ಅವರ ಕಾರು ಚಾಲಕ ನವೀದ್ ಪಾಶಾ ಅಸಭ್ಯವಾಗಿ ವರ್ತಿಸಿ, ಖಾಸಗಿ ಅಂಗಗಳನ್ನು ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಪ್ರತಿರೋಧ ತೋರಿದಾಗ ಮನೆಯ ತನಕ ಕಾರಿನಲ್ಲಿ ಕರೆದೊಯ್ದು ಬಿಟ್ಟು, ಕಾರ್ ಕೀ ನೀಡಿ ಪರಾರಿಯಾಗಿದ್ದಾನೆ ಎಂದು ದೂರು ನೀಡಲಾಗಿದೆ.

ಸದ್ಯ ನೊಂದ ಮಹಿಳೆ ನೀಡಿರುವ ದೂರಿನನ್ವಯ ಪುಲಿಕೇಶಿ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354 (ಲೈಂಗಿಕ ಕಿರುಕುಳ) ಆರೋಪದಡಿ ಪ್ರಕರಣ ದಾಖಲಾಗಿದೆ.