ಮನೆ ರಾಷ್ಟ್ರೀಯ ಅಪ್ರಾಪ್ತೆಗೆ ಢಿಕ್ಕಿ ಹೊಡೆದು ಸುಮಾರು ದೂರ ಎಳೆದೊಯ್ದ ಕಾರು ಚಾಲಕ

ಅಪ್ರಾಪ್ತೆಗೆ ಢಿಕ್ಕಿ ಹೊಡೆದು ಸುಮಾರು ದೂರ ಎಳೆದೊಯ್ದ ಕಾರು ಚಾಲಕ

0

ಲಕ್ನೋ: ಅಪ್ರಾಪ್ತ ಬಾಲಕಿ ಸೈಕಲ್‌ ನಲ್ಲಿ ಹೋಗುತ್ತಿರುವಾಗ ಕಾರೊಂದು ಢಿಕ್ಕಿ ಹೊಡೆದು, ಆಕೆಯನ್ನು ಸುಮಾರು ದೂರ ಎಳೆದೊಯ್ದಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಕೊತ್ವಾಲಿ ನಗರದಲ್ಲಿ ನಡೆದಿದೆ.

ಬಾಲಕಿಯ ಕಾಲು ಕಾರಿನಡಿಗೆ ಸಿಲುಕಿಕೊಂಡು ಆಕೆಯನ್ನು ಸುಮಾರು ದೂರದವರೆಗೆ ಎಳೆದುಕೊಂಡು ಹೋಗಿದೆ. ಪರಿಣಾಮ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರ್ಲಕ್ಷ್ಯವಾಗಿ ಕಾರು ಚಲಾಯಿಸಿದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ದೆಹಲಿಯ ಸುಲ್ತಾನ್ ಪುರಿಯಲ್ಲಿ ಅಂಜಲಿ ಎನ್ನುವ ಯುವತಿಯ ಸ್ಕೂಟಿಗೆ ಕಾರು ಢಿಕ್ಕಿಯಾಗಿ, ಕಾರಿನಲ್ಲಿದ್ದವರು ಆಕೆಯನ್ನು ಸುಮಾರು ದೂರದವರೆಗೂ ಎಳೆದುಕೊಂಡು ಹೋಗಿದ್ದರು. ಈ ಪ್ರಕರಣದ ಎಲ್ಲಾ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.