ಕುಣಿಗಲ್ : ಕುಣಿಗಲ್ ಪುರಸಭೆಯಲ್ಲಿ 2022-23 ನೇ ಸಾಲಿನ ಕಂದಾಯ ತಾಂತ್ರಿಕ, ಆರೋಗ್ಯ ಮತ್ತು ಲೆಕ್ಕ ಶಾಖೆಗಳಿಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಅವ್ಯವಹಾರ ಸಂಬಂಧ ತನಿಖಾಧಿಕಾರಿಗಳು ನೀಡಿದ ವರದಿ ಮೇರೆಗೆ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಅವರನ್ನು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಸೇವೆಯಿಂದ ಅಮಾನತು ಪಡಿಸಿ ಆದೇಶ ಹೊರಡಿಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಅವರ ಮೇಲಿನ ಅವರ ಮೇಲಿನ ದೂರು ಕುರಿತಂತೆ ಉಲ್ಲೇಖ (1) ರ ಸರ್ಕಾರದ ಪತ್ರದ ಅನ್ವಯ, ಉಲ್ಲೇಖ ಎರಡರ ನಿರ್ದೇಶನಾಲಾಯದ ಅಧಕೃತ ಜ್ಞಾನಪನದಂತೆ ತನಿಖಾ ತಂಡವು ಕುಣ ಗಲ್ ಪುರಸಭೆಯಲ್ಲಿ 2022-23 ನೇ ಸಾಲಿನಿಂದ ಕಂದಾಯ, ತಾಂತ್ರಿಕ, ಆರೋಗ್ಯ ಮತ್ತು ಲೆಕ್ಕ ಶಾಖೆಗಳಿಗೆ ಸಂಬಂಧಿಸಿದಂತೆ ಸಮಗ್ರವಾದ ತನಿಖೆ ನಡೆಸಿ ಸಲ್ಲಿಸಿರುವ ತನಿಖಾ ವರದಿಯಲ್ಲಿ ಗಂಭೀರ ಸ್ವರೂಪದ ಲೋಪದೋಷಗಳು ಕಂಡು ಬಂದಿರುತ್ತದೆ ಎಂದು ನಿರ್ದೇಶಕರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ,
ಸಾಮಾನ್ಯ ನಿಧಿಯಡಿಯಲ್ಲಿ ಕೊಟೇಷನ್ ಮುಖಾಂತರ ತುಂಡು ಗುತ್ತಿಗೆಯನ್ನು ನಿರ್ವಹಿಸಿ ಪುರಸಭಾ ನಿಧಿಗೆ ನಷ್ಟ ಉಂಟು ಮಾಡಿದ್ದಾರೆ, ಮೋಟರ್ ಪಂಪು ಮತ್ತು ಪೈಪ್ ಲೈನ್ ಸಾಮಗ್ರಿಗಳನ್ನು ಅಳವಡಿಕೆ ಹಾಗೂ ಕೊಳವೆ ಬಾವಿಗಳ ಕಾಮಗಾರಿಗೆ ಸಂಬಂಧಿಸಿದಂತೆ ಕೊಟೇಷನ್ ಮುಂಖಾತರ ಗುತ್ತಿಗೆಯನ್ನು ನಿರ್ವಹಿಸಿ ಪುರಸಭೆಗೆ ನಷ್ಟ ಉಂಟು ಮಾಡಿದ್ದಾರೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಇಲ್ಲದೆ ನಿಯಮ ಬಾಹಿರವಾಗಿ ಅಂತರ್ ನಿಧಿ ವರ್ಗಾವಣೆ ಮಾಡಿರುವುದು ಠೇವಣ ಕಾಮಗಾರಿಗಳನ್ನು ಸಂಪೂರ್ಣವಾಗಿ ಮೇಲ್ವಿಚಾರಣೆಯಲ್ಲಿ ವಿಳಂಬವಾಗಿರುವುದು ಕುರಿತು ವಾರ್ಡ್ವಾರು ಉದ್ದಿಮೆಪರವಾನಗೆ ಬೇಡಿಕೆ ವಹಿಸಿ ಹಾಜರು ಪಡಿಸಿರುವುದಿಲ್ಲ, ಮೋಟರ್ ವಾಹನಗಳ ನಿರ್ವಾಹಣೆಯನ್ನು ಸಮರ್ಪಕವಾಗಿ ನಿರ್ವಹಿಸದೇ ನ್ಯೂನತೆಗಳು ಉಂಟಾಗಲು ಕಾರಣರಾಗಿದ್ದಾರೆ ಪುರಸಭೆಯ ಮೂರನೇ ವಾರ್ಡ್ ಪುರಸಭೆಗೆ ಸೇರಿದ ಆಸ್ತಿ ಸಂಖ್ಯೆ 1183-227 ನಿವೇಶನದ ಒತ್ತುವರಿ ಬಗ್ಗೆ ಕ್ರಮ ವಹಿಸದೇ ಇರುವುದು, ವಾರ್ಡ್ 19 ರಲ್ಲಿ ನಿಯಮ ಬಾಹಿರವಾಗಿ ಖಾತಾ ವರ್ಗಾವಣೆ ಮಾಡಿರುವುದು, ವಾರ್ಡ್ ನಂ 18 ತೇಜು ಬಡಾವಣೆಯ ಖರಾಬು ಜಾಗವನ್ನು ನಿಯಮ ಬಾಹಿರವಾಗಿ ಖಾತೆಯನ್ನು ನೀಡಿರುವುದು, ಬಫರ್ ಝುನ್ ಜಾಗದಲ್ಲಿ ಅಕ್ರಮವಾಗಿ ಖಾತೆ ಮಾಡಿರುವುದು, ಬಿಎಲ್ಎಸ್ಆರ್ ವಾರ್ಡ್ ಬಡಾವಣೆಯ ವಾರ್ಡ್ ನಂ 12 ರ ಪುರಸಭಾ ವ್ಯಾಪ್ತಿಯನ್ನು ಮೀರಿ ನಿಯಮ ಬಾಹಿರವಾಗಿ ತಂತ್ರಾಶದಲ್ಲಿ ಖಾತೆ ನೀಡಿರುವುದು, ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳನ್ನು ವಿಲೆ ಮಾಡದೇ ಇರುವುದನ್ನು ತನಿಖಾ ತಂಡವು ವರದಿ ನೀಡಿ ದ ಹಿನ್ನಲೆಯಲ್ಲಿ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಅವರನ್ನು ಸೇವೆಯಿಂದ ಅಮಾನತು ಪಡಿಸಲಾಗಿದೆ ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಆದೇಶಿಸಿದ್ದಾರೆ .