ಮನೆ ಅಪರಾಧ ಹುಣಸೂರು: ಗೃಹಿಣಿ ನಾಪತ್ತೆ

ಹುಣಸೂರು: ಗೃಹಿಣಿ ನಾಪತ್ತೆ

0

ಹುಣಸೂರು(Hunsur): ತಾಲೂಕಿನ ಬಸವನಹಳ್ಳಿಯ ನಿವಾಸಿಯಾದ ಕೂಲಿ ಕಾರ್ಮಿಕ ಅಶೋಕ ಎಂಬುವವರ ಪತ್ನಿ ಸಂಗೀತಾ(23)  ಮನೆಯಿಂದ ಹೊರ ಹೋದವರು ಹಿಂತಿರುಗಿ ಬಾರದೆ ನಾಪತ್ತೆಯಾಗಿದ್ದಾರೆ.

ಜ. 9ರ ಸೋಮವಾರ ಬೆಳಗ್ಗೆ ಪತಿ ಕೆಲಸಕ್ಕೆ ತೆರಳಿದ್ದ ವೇಳೆ ಸಂಗೀತಾ ಮನೆಯಿಂದ ಹೊರಗೆ ಹೋಗಿದ್ದವರು ವಾಪಸ್ ಮರಳಿಲ್ಲ ಎನ್ನಲಾಗಿದ್ದು, ಪತ್ನಿಯನ್ನು ಹುಡುಕಿ ಕೊಡುವಂತೆ ಬಿಳಿಕೆರೆ ಠಾಣೆ ಪೊಲೀಸರಿಗೆ ಪತಿ ಅಶೋಕ ದೂರು ನೀಡಿದ್ದಾರೆ.

ಚಹರೆ: ಸುಮಾರು 5 ಅಡಿ ಎತ್ತರ, ದುಂಡುಮುಖ, ಸಾದಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ನೀಲಿ ಬಣ್ಣದ ಚೂಡಿದಾರ್ ಟಾಪ್, ಬಿಳಿ ಪ್ಯಾಂಟ್ ಧರಿಸಿದ್ದು, ಕನ್ನಡ ಮಾತನಾಡುತ್ತಾರೆ. ಪತ್ತೆಯಾದಲ್ಲಿ ಬಿಳಿಕೆರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಇನ್ಸ್ಪೆಕ್ಟರ್ ಚಿಕ್ಕಸ್ವಾಮಿ(9480805057)ಕೋರಿದ್ದಾರೆ.