ಮನೆ ಉದ್ಯೋಗ ಇಂಡಿಯನ್ ಕೋಸ್ಟ್ ಗಾರ್ಡ್’ನಲ್ಲಿ ಉದ್ಯೋಗಾವಕಾಶ

ಇಂಡಿಯನ್ ಕೋಸ್ಟ್ ಗಾರ್ಡ್’ನಲ್ಲಿ ಉದ್ಯೋಗಾವಕಾಶ

0

ಭಾರತೀಯ ಕರಾವಳಿ ಪಡೆಯಲ್ಲಿ ಅಗತ್ಯ ಇರುವ ಅಸಿಸ್ಟಂಟ್ ಕಮಾಂಡಂಟ್ ಜೆನೆರಲ್ ಡ್ಯೂಟಿ, ಕಮರ್ಷಿಯಲ್ ಪೈಲಟ್ ಲೈಸನ್ಸ್ ಮತ್ತು ಟೆಕ್ನಿಕಲ್ (ಇಂಜಿನಿಯರಿಂಗ್ ಮತ್ತು ಇಲೆಕ್ಟ್ರಿಕಲ್ / ಇಲೆಕ್ಟ್ರಾನಿಕ್ಸ್), ಕಾನೂನು ವಿಭಾಗದಲ್ಲಿ ನೇಮಕ ಮಾಡಲಾಗುತ್ತದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್’ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಅಸಿಸ್ಟಂಟ್ ಕಮಾಂಡಂಟ್ ಹುದ್ದೆಗಳ ವಿವರ

ಜೆನೆರಲ್ ಡ್ಯೂಟಿ (ಜಿಡಿ) : 40

ಕಮರ್ಷಿಯಲ್ ಪೈಲಟ್ ಲೈಸನ್ಸ್ (ಎಸ್’ಎಸ್’ಎ) : 10

ಟೆಕ್ನಿಕಲ್ (ಇಂಜಿನಿಯರಿಂಗ್) : 06

ಟೆಕ್ನಿಕಲ್ (ಇಲೆಕ್ಟ್ರಿಕಲ್ / ಇಲೆಕ್ಟ್ರಾನಿಕ್ಸ್) : 14

ಕಾನೂನು ಎಂಟ್ರಿ : 01

ವಿದ್ಯಾರ್ಹತೆ ವಿವರ

ಜೆನೆರಲ್ ಡ್ಯೂಟಿ (ಜಿಡಿ) : ಬ್ಯಾಚುಲರ್ ಡಿಗ್ರಿ

ಕಮರ್ಷಿಯಲ್ ಪೈಲಟ್ ಲೈಸನ್ಸ್ (ಎಸ್’ಎಸ್’ಎ) : 12th ಪಾಸ್, ಡಿಪ್ಲೊಮ / ವ್ಯಾಲಿಡ್ ಕಮರ್ಷಿಯಲ್ ಪೈಲಟ್ ಲೈಸನ್ಸ್.

ಟೆಕ್ನಿಕಲ್ (ಇಂಜಿನಿಯರಿಂಗ್) : ಇಂಜಿನಿಯರಿಂಗ್ ಪದವಿ.

ಟೆಕ್ನಿಕಲ್ (ಇಲೆಕ್ಟ್ರಿಕಲ್ / ಇಲೆಕ್ಟ್ರಾನಿಕ್ಸ್) : ಇಂಜಿನಿಯರಿಂಗ್ ಪದವಿ.

ಕಾನೂನು ಎಂಟ್ರಿ : ಕಾನೂನು ಪದವಿ .

ಪ್ರಮುಖ ದಿನಾಂಕಗಳು

ಅಪ್ಲಿಕೇಶನ್ ಸಲ್ಲಿಸಲು ಆರಂಭ ದಿನಾಂಕ: 25-01-2023 ರ ಬೆಳಿಗ್ಗೆ 11 ಗಂಟೆಯಿಂದ.

ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 09-02-2023 ರ ಸಂಜೆ 05-00 ಗಂಟೆವರೆಗೆ.

ವಯೋಮಿತಿ ಅರ್ಹತೆಗಳು

ಜೆನೆರಲ್ ಡ್ಯೂಟಿ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಜನ್ಮ ದಿನಾಂಕ 01-07-1998 ಮತ್ತು 30-06-2002 ರ ನಡುವೆ ಇರಬೇಕು.

ಕಮರ್ಷಿಯಲ್ ಪೈಲಟ್ ಎಂಟ್ರಿ (ಸಿಪಿಎಲ್-ಎಸ್’ಎಸ್’ಎ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಜನ್ಮ ದಿನಾಂಕ 01-07-1998 ರಿಂದ 30-06-2004 ರ ನಡುವೆ ಇರಬೇಕು.

ಟೆಕ್ನಿಕಲ್ (ಇಂಜಿನಿಯರಿಂಗ್ ಮತ್ತು ಇಲೆಕ್ಟ್ರಿಕಲ್) ಹುದ್ದೆಗೆ ಅರ್ಜಿ ಸಲ್ಲಿಸುವವರು ಜನ್ಮ ದಿನಾಂಕ 01-07-1998 ರಿಂದ 30-06-2002 ರ ನಡುವೆ ಇರಬೇಕು.

ಕಾನೂನು ಎಂಟ್ರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ಜನ್ಮ ದಿನಾಂಕ 01-07-1994 ರಿಂದ 30-06-2002 ರ ನಡುವೆ ಇರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶುಲ್ಕ ರೂ.250 ಪಾವತಿಸಬೇಕು. ಎಸ್ಸಿ/ ಎಸ್ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಆನ್’ಲೈನ್ ಮೂಲಕ ಶುಲ್ಕ ಪಾವತಿ ಮಾಡಬಹುದು.

ಭಾರತೀಯ ಕರಾವಳಿ ಪಡೆಯ ಅಧಿಕೃತ ವೆಬ್’ಸೈಟ್ ವಿಳಾಸ: https://joinindiancoastguard.cdac.in