ಮನೆ ದೇವರ ನಾಮ ಅಂಬಾ ನೀ ಹೂವ ಪಾಲಿಸೆ ವರ ನೀಡೆ

ಅಂಬಾ ನೀ ಹೂವ ಪಾಲಿಸೆ ವರ ನೀಡೆ

0

ಅಂಬಾ ನೀ ಹೂವ ಪಾಲಿಸೆ ವರ ನೀಡೆ

ಶ್ರೀ ಜಗದಂಬಾ ನೀ ಹೂವ ಪಾಲಿಸೆ

ಅಂಬಾ ನೀ ಹೂವ ಪಾಲಿಸೆ ಶಂಭು ಶಂಕರನ ರಾಣಿ

ರಂಭೆ ಪಾರ್ವತಿ ನಿನ್ನ ಪಾದಾಂಬುಜಕ್ಕೆರಗುವೆ

ಬಳೆಯು ಕರಿಯಮಣಿ ಕೊರಳ ಮಂಗಳ ಸೂತ್ರ

ಸ್ಥಿರವಾಗಿಯಿರುವಂತೆ ಸರ್ವ ಸಂಪತ್ತು ನೀಡಂಬಾ

ಮಕ್ಕಳು ಮನೆ ಭಾಗ್ಯ ತೊಟ್ಟಿಲು ತೂಗುವಂತೆ

ಮೃಷ್ಟಾನ್ನ ದಾನ ಮಾಡಲಿಷ್ಟಾರ್ಥದ್ವರಗಳ ಅಂಬಾ

ರುದ್ರನ ಸತಿಯಳೆ ಬುದ್ಧ್ಯಾತ್ಮಳೆನಿಸುವಿ

ಭದ್ರೆ ನಿನ್ನಯ ಮುಡಿಯಲ್ಲಿದ್ದ ಮಲ್ಲಿಗೆಯ ನೀಡಂಬಾ

ಇಂತು ಬೇಡುವೆ ನಿನ್ನ ಸಂಪಿಗೆ ಮುಡಿಮ್ಯಾಲಿ-

ದ್ದಂಥ ಕುಸುಮದೊಳು ಶಾವಂತಿಗೆ ಸರವ

ಭೀಮೇಶಕೃಷ್ಣನ ನಿಜ ಪಾದಭಜಕಳೆ ನೀ

ದಯದಿಂದ ಧರ್ಮ ಕಾಮ್ಯಾರ್ಥದ್ವರಗಳ