ಮನೆ ಅಪರಾಧ ಸ್ನೇಹಿತರೊಂದಿಗೆ ಜಾಲಿ ರೈಡ್ ಹೋಗಿದ್ದನ್ನು ಪ್ರಶ್ನಿಸಿದ ಪ್ರಿಯಕರ: ಬಾಲಕಿ ಆತ್ಮಹತ್ಯೆ

ಸ್ನೇಹಿತರೊಂದಿಗೆ ಜಾಲಿ ರೈಡ್ ಹೋಗಿದ್ದನ್ನು ಪ್ರಶ್ನಿಸಿದ ಪ್ರಿಯಕರ: ಬಾಲಕಿ ಆತ್ಮಹತ್ಯೆ

0

ಹಾಸನ: ಸ್ನೇಹಿತರೊಂದಿಗೆ ಬೈಕ್​’ನಲ್ಲಿ ಜಾಲಿ ರೈಡ್ ಹೋಗಿದ್ದನ್ನು ಪದೇ ಪದೇ ಪ್ರಶ್ನಿಸುತ್ತಿದ್ದ ಪ್ರಿಯಕರನ ವರ್ತನೆಗೆ ಬೇಸತ್ತು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.

ಮೃತ ಬಾಲಕಿ ಯಳಸೂರು ಗ್ರಾಮದ ಲೋಕೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆಕೆ ಮತ್ತೊಬ್ಬ ಯುವಕನೊಂದಿಗೆ ಜಾಲಿ ರೈಡ್​ ಹೋಗಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಮೇಲೆ ಪದೇ ಪದೇ ಅನುಮಾನಗೊಂಡು ಜಗಳವಾಡುತ್ತಿದ್ದ. ಇದರಿಂದ ಮನನೊಂದ ಬಾಲಕಿ ಮೂರು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.

ಇನ್ನು, ಬಾಲಕಿಯ ಸಾವಿಗೆ ಪ್ರಿಯಕರ ಲೋಕೇಶ್​ ಪರೋಕ್ಷ ಕಾರಣ ಎಂದು ಆರೋಪಿಸಿ ಪೋಷಕರು ಯಳಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನನ್ವಯ ಯಳಸೂರು ಪೊಲೀಸರು ಲೋಕೇಶ್​ ಅನ್ನು ವಶಕ್ಕೆ ಪಡೆದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.